ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಯ ಆಗಮನ ಆಗಿದೆ. ಹೊಸ ಅತಿಥಿಯ ಆಗಮನದಿಂದ ಝೂನಲ್ಲಿ ಸಂತಸ ಮನೆ ಮಾಡಿದೆ.
ಮುದ್ದಾದ ಮರಿಗೆ ಹಿಪ್ಪೋಪೊಟಮಸ್(ನೀರು ಕುದುರೆ) ಜನ್ಮ ನೀಡಿದೆ. ಕೆಲ ದಿನಗಳ ಕಾಲ ಐಸೋಲೇಷನ್ ಮಾಡಿ ಆರೈಕೆ ಮಾಡಲಾಗಿತ್ತು. ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ನೀಡದೆ ಪೋಷಣೆ ಮಾಡಲಾಗಿತ್ತು. ತಾಯಿ ದೃಶ್ಯ ಕೂಡ ಮರಿ ಹಿಪ್ಪೋವನ್ನ ಜಾಗರೂಕತೆಯಿಂದ ನೋಡಿಕೊಳ್ಳುತ್ತಿದೆ.
ತಾಯಿ, ಮರಿಯ ಆರೋಗ್ಯದ ಮೇಲೆ ನಿಗಾ ಇಟ್ಟಿರುವ ವೈದ್ಯರು ಮತ್ತು ಸಿಬ್ಬಂದಿಗಳು ಅಲರ್ಟ್ ಆಗಿದ್ದಾರೆ. ಮರಿಯ ಜನನದಿಂದ 5ಕ್ಕೆ ಹಿಪ್ಪೋಗಳ ಸಂಖ್ಯೆ ಏರಿಕೆ ಆಗಿದೆ. ಮರಿ ಹಿಪ್ಪೋವನ್ನ ನೋಡಲು ಪ್ರವಾಸಿಗರು ಕಾತರರಾಗಿದ್ದಾರೆ. ಹಿಪ್ಪೋ ಮರಿ ಹೆಣ್ಣಾದರೆ ದಿವಂಗತ ಡಾ.ಸಮೀಕ್ಷಾ ರೆಡ್ಡಿ ಹೆಸರು ಇಡಲು ಚಿಂತನೆ ನಡೆಸಲಾಗಿದೆ.ತ್ಯಾವರೆಕೊಪ್ಪ ಮೃಗಾಲಯದಲ್ಲಿ ಕರ್ತವ್ಯದ ವೇಳೆ ಹಿಪ್ಪೋ ದಾಳಿಗೆ ಮೃತಪಟ್ಟಿದ್ದ ವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಅವರ ಗೌರವಾರ್ಥವಾಗಿ ಸಮೀಕ್ಷಾ ಎಂದು ಹೆಸರಿಡಲು ಚಿಂತನೆ ನಡೆಸಲಾಗಿದೆ.
PublicNext
14/06/2026 04:12 pm
LOADING...