ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ರಸ್ತೆ ಅಭಿವೃದ್ಧಿಗಾಗಿ ಸಾಮೂಹಿಕ ಸಾವಿಗೆ ಸಿದ್ಧ : ಗ್ರಾಮಸ್ಥರ ಆತಂಕಕಾರಿ ಎಚ್ಚರಿಕೆ

ಗದಗ.ಕೆಲವೇ ದಿನಗಳಲ್ಲಿ ರಸ್ತೆ ಅಭಿವೃದ್ಧಿಯ ಕಾಮಗಾರಿ ಶುರುವಾಗದಿದ್ದರೆ ಗ್ರಾಮದವರೆಲ್ಲರೂ ಸಾಮೂಹಿಕ ಸಾವಿಗೀಡಾಗುವ ಪರಿಸ್ಥಿತಿ ಎದುರಾಗುತ್ತದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಯಲ್ಲಪ್ಪ ಸೂರಣಗಿ ಹೇಳಿದರು.

ಅವರು ಮಾತನಾಡಿ, ತಾಲೂಕಿನಿಂದ ಕೊನೆಯ ಗ್ರಾಮದ ಬಾಲೇಹೊಸೂರು ಗದಗ ಜಿಲ್ಲೆಗೆ ಮತ್ತು ತಾಲೂಕಿಗೆ ಕೊನೆಯ ಗ್ರಾಮವಾಗಿದೆ ಶಾಲಾ ಕಾಲೇಜು, ಆಸ್ಪತ್ರೆ, ಉದ್ಯೋಗ ಮತ್ತು ವ್ಯಾಪಾರ, ದೈನಂದಿನ ವಹಿವಾಟುಗಳಿಗೆ ಪ್ರತಿದಿನ ಲಕ್ಷ್ಮೇಶ್ವರಕ್ಕೆ ಹೋಗುತ್ತಾರೆ ಗ್ರಾಮಸ್ಥರಿಗೆ ಸಂಪರ್ಕ ಮಾಡಲು ಸರಿಯಾದ ರಸ್ತೆ ಇಲ್ಲ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯು ಸೂರಣಗಿ ಗ್ರಾಮದಿಂದ ಸಾಕಷ್ಟು ತಗ್ಗು ಗುಂಡಿಗಳಿಂದ ರಸ್ತೆ ಹದಗೆಟ್ಟು ಸುಮಾರು ದಶಕಗಳು ಕಳೆದಿದ್ದು, ಕಳೆದ ಒಂದೂವರೆ ವರ್ಷದ ಹಿಂದೆಯೇ ಸುಮಾರು ಏಳು ಕೋಟಿ ರೂಪಾಯಿ ಅನುದಾನ ರಸ್ತೆಗಾಗಿ ಬಿಡುಗಡೆಯಾಗಿದ್ದರೂ ಸಹ ಕಾರಣಾಂತರಗಳಿಂದ ರಸ್ತೆ ಕಾಮಗಾರಿ ನಡೆಯುತ್ತಿಲ್ಲ ಗುತ್ತಿಗೆದಾರರು ಕಾಮಗಾರಿ ಮಾಡಲು ಮೀನಮೇಷ ಎಣಿಸುತ್ತಿದ್ದಾರೆ.ಸಾಕಷ್ಟು ಬಾರಿ ಸರ್ಕಾರಕ್ಕೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅಲ್ಲದೆ ಎಷ್ಟೋ ಬಾರಿ ರಸ್ತೆ ತಡೆದು ಹೋರಾಟ ಮಾಡಿದ್ದೇವೆ. ಅಲ್ಲದೆ ಹದಗೆಟ್ಟ ರಸ್ತೆಯಿಂದ ಸರ್ಕಾರಿ ಸಾರಿಗೆ ಬಸ್ ಬರುತ್ತಿಲ್ಲ ಬಸ್ಸುಗಳು ಬಂದರೂ ಪದೇ ಪದೇ ಕೆಟ್ಟು ನಿಲ್ಲುತ್ತಿವೆ ಎಂದು ಸಾರಿಗೆ ಅಧಿಕಾರಿಗಳು ಬಸ್ ಬಿಡುವುದಿಲ್ಲ ಎಂದು ಸಾಕಷ್ಟು ಬಾರಿ ಬಸ್ ಬಂದ್ ಮಾಡಿದ್ದಾರೆ.

ಇತ್ತೀಚೆಗೆ ಸರ್ಕಾರಕ್ಕೆ ಮನವಿ ಮಾಡಿಕೊಂಡು ಮಾನ್ಯ ಲೋಕೋಪಯೋಗಿ ಸಚಿವರಲ್ಲಿ ನಮ್ಮ ಅಳಲನ್ನು ತೋಡಿಕೊಂಡು ಬಾಲೇಹೊಸೂರಿನಿಂದ ಸೂರಣಗಿ ವರೆಗೆ ರಸ್ತೆ ಅಭಿವೃದ್ಧಿಗೆ ಸುಮಾರು 7 ಕೋಟಿ ರೂಪಾಯಿ ಹಣವನ್ನು ಮಂಜೂರು ಮಾಡಿಸಿದ್ದೇವೆ ಅದಕ್ಕೂ ಸಹ ಕೆಲವರು ತಮ್ಮ ಸ್ವಾರ್ಥದಿಂದ ತಮ್ಮ ವೈಯಕ್ತಿಕ ಲಾಭಕ್ಕಾಗಿ ಆ ಕೆಲಸ ಎರಡು ಬಾರಿ ಟೆಂಡರ್ ಆದರೂ ಕೂಡ ವಿಳಂಬವಾಗುತ್ತಿದೆ ಕಾರಣ ಕೇಳಿದರೆ ಯಾರು ಹೇಳುತ್ತಿಲ್ಲ ಗ್ರಾಮಸ್ಥರಿಗೆ ನಮಗೆಲ್ಲಾ ಸಾಮೂಹಿಕ ದಯಾಮರಣ ಕೊಟ್ಟು ಪುಣ್ಯ ಕಟ್ಟಿಕೊಳ್ಳಲಿ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕೆಲವೇ ದಿನಗಳಲ್ಲಿ ರಸ್ತೆ ಅಭಿವೃದ್ಧಿಯ ಕಾಮಗಾರಿ ಶುರುವಾಗದಿದ್ದರೆ ಗ್ರಾಮದವರೆಲ್ಲರೂ ಸಾಮೂಹಿಕ ಸಾವಿಗೀಡಾಗುವ ಪರಿಸ್ಥಿತಿ ಎದುರಾಗುತ್ತದೆ ಅದಕ್ಕೆ ಕ್ಷೇತ್ರದ ಜನಪ್ರತಿನಿಧಿಗಳು ಮತ್ತು ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಬಾಲೇಹೊಸೂರು ಗ್ರಾಪಂ ಮಾಜಿ ಅಧ್ಯಕ್ಷ ಯಲ್ಲಪ್ಪ ಸೂರಣಗಿ, ರಾಜು ಬೆಂಚಳ್ಳಿ, ಕೋಟೆಪ್ಪ ಪೆದ್ದರ್, ನಾಗರಾಜ ಬಂಡಿ, ಶಿವಪ್ಪ ಮುದಿಯಮ್ಮನವರ, ಮಲ್ಲೇಶ ಚಪ್ಪರಮನಿ ಸೇರಿದಂತೆ ಗ್ರಾಮದ ಅನೇಕ ಉಪಸ್ಥಿತರಿದ್ದರು

Edited By : PublicNext Desk
Kshetra Samachara

Kshetra Samachara

14/06/2026 05:26 pm

Cinque Terre

15.3 K

Cinque Terre

0

ಸಂಬಂಧಿತ ಸುದ್ದಿ