ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾರಾಣಸಿ ಕೋರ್ಟ್‌ನಲ್ಲಿ ಅನಿರೀಕ್ಷಿತ ಘಟನೆ : ನ್ಯಾಯಾಧೀಶರ ಕುರ್ಚಿಯಲ್ಲಿ ಕುಳಿತು ಮಹಿಳೆಯ ಹುಚ್ಚಾಟ.!

ಉತ್ತರ ಪ್ರದೇಶದ ವಾರಾಣಸಿ ನ್ಯಾಯಾಲಯದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ನ್ಯಾಯಾಧೀಶರ ಕುರ್ಚಿಯ ಮೇಲೆ ಕುಳಿತು "ಇಂದು ನಾನು ಜಿಲ್ಲಾ ನ್ಯಾಯಾಧೀಶೆ" ಎಂದು ಘೋಷಿಸಿಕೊಂಡಿದ್ದಾಳೆ. ಈ ಅನಿರೀಕ್ಷಿತ ನಡೆಯಿಂದ ನ್ಯಾಯಾಲಯದಲ್ಲಿದ್ದ ವಕೀಲರು, ಸಿಬ್ಬಂದಿ ಅಚ್ಚರಿಗೊಂಡಿದ್ದು, ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಜೂನ್ 12, ಶುಕ್ರವಾರದಂದು ಈ ಘಟನೆ ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಯಜುವೇಂದ್ರ ವಿಕ್ರಮ್ ಸಿಂಗ್ ರಜೆಯಲ್ಲಿದ್ದಾಗ, ಮಧ್ಯವಯಸ್ಕ ಮಹಿಳೆಯೊಬ್ಬಳು ನ್ಯಾಯಾಲಯದ ಕೋಣೆಗೆ ಪ್ರವೇಶಿಸಿದ್ದಾಳೆ. ಮೊದಲು ನ್ಯಾಯಾಧೀಶರ ಆಗಮನದ ಬಗ್ಗೆ ಸಿಬ್ಬಂದಿಯನ್ನು ವಿಚಾರಿಸಿದ ಆಕೆ, ಬಳಿಕ ನೇರವಾಗಿ ನ್ಯಾಯಾಧೀಶರ ಆಸನದಲ್ಲಿ ಕುಳಿತಿದ್ದಾಳೆ.

ಕುರ್ಚಿಯಲ್ಲಿ ಕುಳಿತ ಕೂಡಲೇ ಮೇಜಿನ ಮೇಲೆ ಕೈ ಬಡಿದು ಪದೇ ಪದೇ "ಆರ್ಡರ್...ಆರ್ಡರ್!" ಎಂದು ಕೂಗಿದ್ದಾಳೆ. "ಇಂದು, ನಾನು ಜಿಲ್ಲಾ ನ್ಯಾಯಾಧೀಶೆ. ಸಾಕ್ಷಿಗಳು ಮತ್ತು ಸಾಕ್ಷ್ಯಗಳನ್ನು ನನ್ನ ಮುಂದೆ ಹಾಜರುಪಡಿಸಿ" ಎಂದು ಆದೇಶ ನೀಡಿದ್ದಲ್ಲದೆ, ಅಲ್ಲಿದ್ದ ಕೇಸ್ ಫೈಲ್‌ಗಳನ್ನು ಪರಿಶೀಲಿಸುವಂತೆ ನಟಿಸಿದ್ದಾಳೆ.

ಮಹಿಳೆಯನ್ನು ಕುರ್ಚಿಯಿಂದ ಏಳುವಂತೆ ಮನವೊಲಿಸಲು ನ್ಯಾಯಾಲಯದ ಸಿಬ್ಬಂದಿ ಮತ್ತು ವಕೀಲರು ಹಲವು ಪ್ರಯತ್ನಗಳನ್ನು ನಡೆಸಿದರು. ಆದರೆ, ಆಕೆ ಕೆಳಗಿಳಿಯಲು ನಿರಾಕರಿಸಿದ್ದಲ್ಲದೆ, ತನ್ನ ಬಳಿ ಬಂದವರ ಮೇಲೆಯೇ ಜೋರಾಗಿ ಕೂಗಾಡಿದ್ದಾಳೆ. ಅಂತಿಮವಾಗಿ, ಮಹಿಳಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಕೆಯನ್ನು ಬಲವಂತವಾಗಿ ಅಲ್ಲಿಂದ ಕರೆದೊಯ್ದಿದ್ದಾರೆ. ವಿಚಾರಣೆಯ ಬಳಿಕ, ಆಕೆಯ ಮಾನಸಿಕ ಸ್ಥಿತಿ ಸರಿಯಿಲ್ಲ ಎಂಬುದು ತಿಳಿದುಬಂದಿದೆ.

Edited By :
PublicNext

PublicNext

14/06/2026 06:07 pm

Cinque Terre

32.96 K

Cinque Terre

1

ಸಂಬಂಧಿತ ಸುದ್ದಿ