ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ಚಿನ್ನ, ಡಾಲರ್ ಭರವಸೆ ನೀಡಿ ಮಹಿಳೆಗೆ 28.95 ಲಕ್ಷ ರೂ. ವಂಚನೆ

ಮಂಗಳೂರು: ಚಿನ್ನ ಮತ್ತು ಡಾಲರ್ ಗಳನ್ನು ವಿದೇಶದಿಂದ ಕಳುಹಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಅಪರಿಚಿತರು 28.95 ಲಕ್ಷ ರೂ. ವಂಚಿಸಿರುವ ಬಗ್ಗೆ ನಗರದ ಸೈಬ‌ರ್ ಕೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2025ರ ಮೇ ತಿಂಗಳಿನಲ್ಲಿ ಫೇಸ್‌ಬುಕ್ ನೋಡುತ್ತಿದ್ದಾಗ ಡಾ.ಕ್ಲಿಂಟನ್ ಸ್ಮಿತ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ನಂತರ ಆತ ತನ್ನ ವಾಟ್ಸ್ಆಪ್ ನಂಬರ್ ಪಡೆದು ಸಂದೇಶ ಕಳುಹಿಸಿ ತಾನು ನೆದರ್‌ಲ್ಯಾಂಡ್‌ನಲ್ಲಿ ವಾಸವಾಗಿದ್ದು, ಕಾರ್ಡಿಯೋಲಾಜಿಸ್ಟ್ ಆಗಿ ರುವೆ ಎಂದಿದ್ದ. ಬಳಿಕ ಪರಸ್ಪರ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದೆವು. ಕೆಲವು ದಿನಗಳ ಬಳಿಕ ಆತ ವಿದೇಶಿ ಚಿನ್ನ ಮತ್ತು ಡಾಲರ್‌ಗಳನ್ನು ಕಳುಹಿಸುವುದಾಗಿ ನಂಬಿಸಿದ್ದ. ಒಂದು ದಿನ ಚಿನ್ನ ಮತ್ತು ಡಾಲರ್ ವಿಮಾನದ ಮೂಲಕ ಪಾರ್ಸೆಲ್ ಮಾಡಿದ್ದು, ಹೊಸದಿಲ್ಲಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದೆ. ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳು ಪಾರ್ಸೆಲ್ ವಶಪಡಿಸಿಕೊಂಡಿದ್ದಾರೆ ಎಂದಿದ್ದ. 'ಅ ಬಳಿಕ ದಿಲ್ಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಎನ್ನುತ್ತಾ ಅಪರಿಚಿತ ವ್ಯಕ್ತಿಗಳು ದೂರವಾಣಿ ಕರೆ ಮಾಡಿ ವಿದೇಶದಿಂದ ಪಾರ್ಸೆಲ್ ಬಂದಿದ್ದು, ಕಸ್ಟಮ್ಸ್ ಸುಂಕ ಪಾವತಿ ಮಾಡಬೇಕು ಎನ್ನುತ್ತಾ ಸುಂಕದ ಅಧಿಕಾರಿ ತುಷಾರ್ ಎಂಬವರ ಮೊಬೈಲ್ ಸಂಖ್ಯೆ ನೀಡಿದ್ದರು. ತಾನು ಆ ಸಂಖ್ಯೆಗೆ ಕರೆ ಮಾಡಿದಾಗ ಆತ ಪಾರ್ಸೆಲ್ ನೀಡಲು ಸ್ಟೋರೇಜ್ ಚಾರ್ಜ್ ಎಂದು ದಿನಕ್ಕೆ 5,000 ರೂ.ನಂತೆ ಮತ್ತು ಕಸ್ಟಮ್ ಸುಂಕ ಪಾವತಿ ಮಾಡಬೇಕು ಎಂದು ತಿಳಿಸಿದ್ದ.

ಅದರಂತೆ ತಾನು ಅಪರಿಚಿತ ವ್ಯಕ್ತಿ ತಿಳಿಸಿದ ವಿವಿಧ ಖಾತೆಗಳಿಗೆ 28.95 ಲಕ್ಷ ರೂ. ಪಾವತಿ ಮಾಡಿದ್ದೆ. ಆ ವ್ಯಕ್ತಿ ಪಾರ್ಸೆಲನ್ನು ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸುವುದಾಗಿ ತಿಳಿಸಿದ್ದು, ವಿಮಾನ ನಿಲ್ದಾಣಕ್ಕೆ ಹೋಗಿ ವಿಚಾರಿಸಿದಾಗ ಯಾವುದೇ ಪಾರ್ಸೆಲ್‌ ಬಂದಿಲ್ಲ ಎಂದಿದ್ದಾರೆ. ಅಪರಿಚಿತ ವ್ಯಕ್ತಿಗೆ ಕರೆ ಮತ್ತು ಸಂದೇಶ ಕಳುಹಿಸಿದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗೆ 2025ರ ಜೂ.6ರಿಂದ 2026ರ ಮೇ 8ರವರೆಗೆ ಹಂತ ಹಂತವಾಗಿ 28.95 ಲಕ್ಷ ರೂ. ವನ್ನು ಅಪರಿಚಿತರು ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ' ಎಂದು 54 ವರ್ಷದ ಮಹಿಳೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

14/06/2026 09:17 pm

Cinque Terre

628

Cinque Terre

0

ಸಂಬಂಧಿತ ಸುದ್ದಿ