ಹಿರಿಯಡ್ಕ: ಪೆರ್ಡೂರು ಪದ್ಮಕಮಲ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಶಕ್ತಿ ಸಂಘದ ಮುಖ್ಯ ಬರಹಗಾರರೊಬ್ಬರು ಸಂಘದ ಲಕ್ಷಾಂತರ ರೂ. ಹಣವನ್ನು ದುರುಪಯೋಗಪಡಿಸಿ ವಂಚಿಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಘದ ಮುಖ್ಯ ಬರಹಗಾರರಾದ ಸುಗಂಧಿ ಎಂಬವರು 2023ನೇ ಸಾಲಿನಿಂದ 2025 ಡಿಸೆಂಬರ್ ತಿಂಗಳ ನಡುವಿನ ಅವಧಿಯಲ್ಲಿ ವಿವಿಧ ಶ್ರೀಶಕ್ತಿ ಸಂಘಗಳ ಸದಸ್ಯರಿಗೆ ನೀಡಿದ ಸಾಲ, ಸದಸ್ಯರು ಮರು ಪಾವತಿಸಲು ಮಾಡಿದ ಹಣವನ್ನು ಸಂಘದ ಜಮಾ ಪುಸ್ತಕದಲ್ಲಿ ಸಂಬಂಧಿಸಿದ ಖಾತೆಗೆ ಜಮಾ ಮಾಡದೆ ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದರು. ಅಲ್ಲದೆ ಕೆಲ ಸದಸ್ಯರ ಬೇಡಿಕೆ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ನಮೂದಿಸಿ ಅಧ್ಯಕ್ಷರು ಕಾರ್ಯದರ್ಶಿಯವರ ನಕಲಿ ಸಹಿ ಮಾಡಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕಿಗೆ ಸಲ್ಲಿಸಿ ಸಾಲ ಮಂಜೂರು ಮಾಡಿಸಿಕೊಂಡಿದ್ದಾರೆ.
ಬೇಡಿಕೆ ಇದ್ದಷ್ಟು ಹಣವನ್ನು ಸದಸ್ಯರಿಗೆ ನೀಡಿ ಉಳಿದ ಹಣವನ್ನು ತನ್ನ ಸ್ವಂತಕ್ಕೆ ಬಳಿಸಿಕೊಂಡಿದ್ದಲ್ಲದೆ ಕಾರ್ಯಕಾರಿ ಸಮಿತಿಗೆ ತೋರಿಸಲೆಂದು ಪ್ರತ್ಯೇಕ ಪುಸ್ತಕವನ್ನು ಹಾಗೂ ವ್ಯವಹಾರಕ್ಕೆ ಪ್ರತ್ಯೇಕ ಪುಸ್ತಕ ನಿರ್ವಹಿಸುತ್ತಾ ವಿವಿಧ ಸಂಘಗಳಲ್ಲಿ ಒಟ್ಟು 23,00,000 ರೂ. ಹಣವನ್ನು ದುರುಪಯೋಗ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.
PublicNext
15/06/2026 11:03 am
LOADING...