ನವ ದೆಹಲಿ: ಎಂತಹ ಕಾಕತಾಳೀಯ!! ದೇಶದ ಚುನಾವಣೆ ವ್ಯವಸ್ಥೆ ಮತ್ತು ನ್ಯಾಯಾಂಗಕ್ಕೆ ಸಾಷ್ಟಾಂಗ ನಮಸ್ಕಾರ!
ಮಧ್ಯಪ್ರದೇಶದ ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ರದ್ದಾದ ಇಡೀ ಪ್ರಕರಣವನ್ನು ನೋಡಿದರೆ, ನಮ್ಮ ಪ್ರಜಾಪ್ರಭುತ್ವದ ಸಂಸ್ಥೆಗಳು ಎಷ್ಟು "ಅಚ್ಚುಕಟ್ಟಾಗಿ" ಮತ್ತು "ಸಮಯಪ್ರಜ್ಞೆ"ಯಿಂದ ಕೆಲಸ ಮಾಡುತ್ತಿವೆ ಎಂಬುದು ಜಗಜ್ಜಾಹೀರಾಗುತ್ತದೆ!
ಇಲ್ಲಿ ನಡೆದಿರುವ ಸಾಲು ಸಾಲು ಕಾಕತಾಳೀಯಗಳನ್ನು ಒಮ್ಮೆ ಗಮನಿಸಿ:
1. ಮೊದಲ ಕಾಕತಾಳೀಯ:
ತೆಲಂಗಾಣದ ನ್ಯಾಯಾಲಯದಲ್ಲಿದ್ದ ಯಾವುದೋ ಒಂದು ಅನಾಮಧೇಯ ದೂರಿನ ಆಧಾರದ ಮೇಲೆ ಚುನಾವಣಾ ಆಯೋಗವು ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ತರಾತುರಿಯಲ್ಲಿ ರದ್ದು ಮಾಡುತ್ತದೆ.
2. ಎರಡನೇ ಕಾಕತಾಳೀಯ:
ಜೂನ್ 12 ರಂದು ಸುಪ್ರೀಂ ಕೋರ್ಟ್‌ನಿಂದಲೂ ಅವರಿಗೆ ಯಾವುದೇ ತಕ್ಷಣದ ರಿಲೀಫ್ ಸಿಗುವುದಿಲ್ಲ.
3. ಮೂರನೇ ಕಾಕತಾಳೀಯ:
ಅದೇ ಜೂನ್ 12 ರಂದು ಮಧ್ಯಪ್ರದೇಶದಲ್ಲಿ ಬಿಜೆಪಿಯ ಮೂವರು ಅಭ್ಯರ್ಥಿಗಳು ಎದುರಾಳಿಯೇ ಇಲ್ಲದೆ "ಅವಿರೋಧವಾಗಿ" ಜಯಭೇರಿ ಬಾರಿಸುತ್ತಾರೆ!
4. ನಾಲ್ಕನೇ ಮತ್ತು ಅತ್ಯಂತ ರೋಚಕ ಕಾಕತಾಳೀಯ: ಇತ್ತ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ಘೋಷಣೆಯಾಗುತ್ತಿದ್ದಂತೆ, ಅತ್ತ ಅದೇ ಜೂನ್ 12 ರ ರಾತ್ರಿ ಹೈದರಾಬಾದ್ ಸ್ಥಳೀಯ ನ್ಯಾಯಾಲಯವು—"ಈ ದೂರು ನಮ್ಮ ವ್ಯಾಪ್ತಿಗೇ ಬರುವುದಿಲ್ಲ, ಇದನ್ನು ವಿಚಾರಣೆ ಮಾಡಲು ಸಾಧ್ಯವಿಲ್ಲ" ಎಂದು ಅರ್ಜಿಯನ್ನೇ ವಾಪಸ್ ಕಳುಹಿಸುತ್ತದೆ!
ವಾಹ್! ಎಂತಹ ಕ್ರೋನಾಲಜಿ! ಎಂತಹ ಟೈಮಿಂಗ್!!
ಯಾವ ದೂರಿನ ಆಧಾರದ ಮೇಲೆ ಒಬ್ಬ ಅಭ್ಯರ್ಥಿಯ ನಾಮಪತ್ರ ರದ್ದಾಯಿತೋ, ಆ ದೂರಿಗೆ ಕಾನೂನಿನ ಮಾನ್ಯತೆಯೇ ಇರಲಿಲ್ಲ ಎಂಬುದು ಸಾಬೀತಾಗುವಷ್ಟರಲ್ಲಿ ಆಗಬೇಕಾದ ಆಟವೆಲ್ಲ ಮುಗಿದುಹೋಗಿರುತ್ತದೆ!
ಇದೇ ಜಾರ್ಖಂಡ್‌ನಲ್ಲಿ ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಪರಿಮಳ್ ನತ್ವಾಮಿ ಅವರ ನಾಮಪತ್ರದಲ್ಲೂ ಲೋಪದೋಷಗಳಿದ್ದಾಗ ಚುನಾವಣಾ ಆಯೋಗ ಅವರಿಗೆ ತಿದ್ದುಪಡಿ ಮಾಡಲು ಪೂರ್ತಿ ಒಂದು ದಿನ ಸಮಯ ಕೊಡುತ್ತದೆ.
ಆದರೆ ಮೀನಾಕ್ಷಿ ನಟರಾಜನ್ ಅವರಿಗೆ ಆ ತಾರತಮ್ಯದ ಸೌಭಾಗ್ಯ ಸಿಗುವುದಿಲ್ಲ!
ವಿರೋಧ ಪಕ್ಷದ ಒಬ್ಬ ಪ್ರಮುಖ ನಾಯಕಿಗೆ, ಇಡೀ ಪಾರ್ಟಿ ಬೆನ್ನಿಗೆ ನಿಂತು ಸುಪ್ರೀಂ ಕೋರ್ಟ್ ಕದ ತಟ್ಟಿದರೂ ನ್ಯಾಯ ಸಿಗಲು ಚುನಾವಣೆ ಮುಗಿಯುವವರೆಗೆ ಕಾಯಬೇಕೆಂದಾದರೆ, ಸಾಮಾನ್ಯ ಜನಸಾಮಾನ್ಯರ ಕಥೆಯೇನು?
ಇದು ಕೇವಲ ಕಾಕತಾಳೀಯವಲ್ಲ, ಸ್ವೀಡನ್‌ನ ವಿ-ಡೆಮ್ (V-Dem) ಸಂಸ್ಥೆ ಹೇಳಿದಂತೆ ದೇಶವು 'ಚುನಾವಣಾ ಸರ್ವಾಧಿಕಾರತ್ವ' (Electoral Autocracy) ದತ್ತ ವೇಗವಾಗಿ ಮುನ್ನುಗ್ಗುತ್ತಿರುವುದರ ಸ್ಪಷ್ಟ ಮುನ್ಸೂಚನೆ! ಮಾಧ್ಯಮಗಳ ಸೆನ್ಸಾರ್‌ಶಿಪ್, ತನಿಖಾ ಸಂಸ್ಥೆಗಳ ದುರ್ಬಳಕೆ ಮತ್ತು ಸಾಂವಿಧಾನಿಕ ಸಂಸ್ಥೆಗಳ ಈ ಏಕಪಕ್ಷೀಯ ನಡೆಗಳ ವಿರುದ್ಧ ಈಗಲೇ ಧ್ವನಿ ಎತ್ತದಿದ್ದರೆ, ಮುಂದೆ 'ಚುನಾವಣೆ' ಎಂಬುದು ಕೇವಲ ಹೆಸರಿಗಷ್ಟೇ ಉಳಿಯುತ್ತದೆ.
ಬುದ್ಧಿಜೀವಿಗಳೇ, ದೇಶದ ನಾಗರಿಕರೇ.. ಈ "ಅತಿ ಮಧುರ ಕಾಕತಾಳೀಯ"ಗಳ ಬಗ್ಗೆ ಈಗಲಾದರೂ ಮೌನ ಮುರಿಯಿರಿ!
( 'ಫೇಸ್ ಬುಕ್' ನಲ್ಲಿ ಕಣ್ಣಿಗೆ ಬಿದ್ದ ಬರವಣಿಗೆ)
PublicNext
14/06/2026 09:54 pm