ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೂಡ್ಲಿಗಿ : ಬೈಕ್ ಸವಾರನ ಜೀವ ತೆಗೆದ ಬಸ್ ಡ್ರೈವರ್, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಕೂಡ್ಲಿಗಿ : ಬೈಕಿಗೆ ಬಸ್ ಡಿಕ್ಕಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಸವಾರನಿಗೆ ಗಂಭೀರ ಗಾಯ ಆಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮತ್ತಜನಹಳ್ಳಿ ಗ್ರಾಮದ ಕಣಿವೆ ಬಳಿ ದುರ್ಘಟನೆ ನಡೆದಿದೆ. ಮೃತ ಸವಾರನನ್ನ ಕರಿಬಸವ (58) ಅಂತ ಗುರುತಿಸಲಾಗಿದೆ.

ಗಾಯಗೊಂಡ ಸದಾಶಿವ ಸವಾರನನ್ನ (32) ಅಂತ ಗುರುತಿಸಲಾಗಿದೆ. ಇಬ್ಬರೂ ಸವಾರರು ತಾಲೂಕಿನ ಮತ್ತಜನಹಳ್ಳಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಚೋರುನೂರಿನಿಂದ ಗುಡೇಕೋಟೆ ಕಡೆಗೆ ಹೊರಟಿದ್ದ ಸರ್ಕಾರಿ ಬಸ್ ಗೆ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಗುಡೇಕೋಟೆ ಪೊಲೀಸರು ಭೇಟಿ ನೀಡಿ, ಕೇಸ್ ದಾಖಲಿಸಿಕೊಂಡು ಪರಿಶೀಲನೆ ಕೈಗೊಂಡಿದ್ದಾರೆ.

Edited By :
PublicNext

PublicNext

14/06/2026 09:58 pm

Cinque Terre

8.07 K

Cinque Terre

0

ಸಂಬಂಧಿತ ಸುದ್ದಿ