ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೂಡ್ಲಿಗಿ : ಅಪರಿಚಿತ ವಾಹನ ಡಿಕ್ಕಿ, ರಾಷ್ಟ್ರೀಯ ಹೆದ್ದಾರಿಯಲ್ಲೇ ಬಿದ್ದು ನರಳಾಡಿದ ತೋಳ ರಕ್ಷಣೆ

ಕೂಡ್ಲಿಗಿ : ರಸ್ತೆ ದಾಟುತ್ತಿದ್ದ ವೇಳೆ ತೋಳವೊಂದಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಇದ್ರಿಂದ ಗಂಭೀರವಾಗಿ ಗಾಯಗೊಂಡ ತೋಳ ತೀವ್ರ ರಕ್ತಸ್ರಾವದಿಂದ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ನರಳಾಟ ನಡೆಸಿದೆ. ಈ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಖಾನಾಹೊಸಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.

ಎಂದಿನಂತೆ ರಾಷ್ಟ್ರೀಯ ಹೆದ್ದಾರಿಯನ್ನ ತೋಳವೊಂದು ದಾಟಲು ಮುಂದಾಗಿದೆ. ಈ ವೇಳೆ ಹೆದ್ದಾರಿಯಲ್ಲಿ ವೇಗವಾಗಿ ಬಂದಿರೋ ಅಪರಿಚಿತ ವಾಹನ ತೋಳದ ಮುಖಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ಇದ್ರಿಂದ ತೀವ್ರ ಗಾಯಗೊಂಡಿದೆ. ಗಾಯಗೊಂಡು ಬಿದ್ದು ನರಳಾಡ್ತಿದ್ದ ತೋಳವನ್ನ ಸ್ಥಳೀಯರು ರಕ್ಷಿಸಿದ್ದಾರೆ. ಬಳಿಕ ಪಶು ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಪಶು ವೈದ್ಯರು, ಅರಣ್ಯಾಧಿಕಾರಿಗಳು ತೋಳವನ್ನ ಕೂಡ್ಲಿಗಿ ಪಶು ಆಸ್ಪತ್ರೆಯಲ್ಲಿ ರವಾನಿಸಿ ಚಿಕಿತ್ಸೆ ನೀಡಿ ಆರೈಕೆಗೆ ಮುಂದಾಗಿದ್ದಾರೆ.

Edited By : Abhishek Kamoji
Kshetra Samachara

Kshetra Samachara

19/06/2026 05:38 pm

Cinque Terre

1.1 K

Cinque Terre

0

ಸಂಬಂಧಿತ ಸುದ್ದಿ