ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೂಡ್ಲಿಗಿ : ಮಳೆಗಾಗಿ ಕತ್ತೆ, ಕಪ್ಪೆಗಳ ಅದ್ದೂರಿ ಮದುವೆ - ವಾದ್ಯ ಮೇಳಗಳೊಂದಿಗೆ ಭರ್ಜರಿ ಮೆರವಣಿಗೆ

ಕೂಡ್ಲಿಗಿ : ರಾಜ್ಯದಲ್ಲಿ ಮುಂಗಾರು ಮಳೆ ಆರಂಭ ಆಗಿದೆ. ಆದ್ರೆ ಜೂನ್ ತಿಂಗಳ ಅಂತ್ಯ ಬಂದ್ರೂ ಸಮರ್ಪಕ ಮಳೆಯೇ ಸುರಿದಿಲ್ಲ. ಇದ್ರಿಂದ ಕೂಡ್ಲಿಗಿ ತಾಲೂಕಿನಲ್ಲಿ ಮಳೆಗಾಗಿ ಸ್ಥಳೀಯ ರೈತಾಪಿ ವರ್ಗ ಕತ್ತೆಗಳು, ಕಪ್ಪೆಗಳ ಮದುವೆ ಮಾಡಿಸಿದ್ದಾರೆ. ಇದ್ರಿಂದ ಮಳೆ ಬರುತ್ತೆ ಅನ್ನೋ ನಂಬಿಕೆ ಇಲ್ಲಿನ ಜನರದು.

ಜಾನಪದೀಯ ಧಾರ್ಮಿಕ ಆಚರಣೆಗಳ ಮೂಲಕ ವರುಣನ ಕೃಪೆಗಾಗಿ ಪೂಜೆ ಆಚರಣೆಗಳ ಜನ ಮೊರೆ ಹೋಗಿದ್ದಾರೆ. ಅಂತೆಯೇ ಕೂಡ್ಲಿಗಿ ಪಟ್ಟಣದ ಕೋಟೆಯಲ್ಲಿ ಈ ಹಿಂದೆಯೇ ಮಳೆ ಗಂಗಮ್ಮ ಪೂಜೆ ಜರುಗಿಸಲಾಗಿತ್ತು.

ಶುಕ್ರವಾರದಂದು ಪಟ್ಟಣದ ಪೇಟೆಬಸವೇಶ್ವರ ನಗರದಲ್ಲಿ ಮಳೆಗಾಗಿ ಕತ್ತೆ, ಕಪ್ಪೆ ಮದುವೆ ಮತ್ತು ಮೆರವಣಿಗೆ ನೆರವೇರಿಸಲಾಯ್ತು. ದೈವಸ್ಥರು, ಹಿರಿಯರು, ಮಹಿಳೆಯರು, ಮಕ್ಕಳು ಮತ್ತು ಯುವಕರು ಒಗ್ಗೂಡಿ ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಅಂತಿಮವಾಗಿ ದೈವಸ್ಥರೆಲ್ಲರೂ ಸೇರಿ ಪೂಜೆ ನೆರವೇರಿಸಿ ಮಳೆಗಾಗಿ ಆರಾಧಿಸಲಾಯಿತು. ಬಾಲಕನಿಗೆ ಗಂಗೆಯುಳ್ಳ ಮಡಕೆಯನ್ನೊರಿಸಿ ಮೆರವಣಿಗೆ ಮಾಡಲಾಯಿತು.

ಆಚರಣೆಗಳು ವಿಜ್ಞಾನಕ್ಕೆ ತರ್ಕಕ್ಕೆ ನಿಲುಕದಿಲ್ಲವಾದರೂ ಭಾರತೀಯರ ಸಾಂಸ್ಕೃತಿಕತೆಗೆ, ಪ್ರಕೃತಿಯ ಮೇಲಿನ ಬಲವಾದ ನಂಬಿಕೆಯನ್ನು ಇಂತಹ ಆಚರಣೆಗಳು ಪ್ರತಿಭಿಂಬಿಸುತ್ತಿವೆ.

ಪಾಂಡುರಂಗ ಜಂತ್ಲಿ ಪಬ್ಲಿಕ್ ನೆಕ್ಸ್ಟ್ ವಿಜಯನಗರ

Edited By :
PublicNext

PublicNext

20/06/2026 01:41 pm

Cinque Terre

8.69 K

Cinque Terre

0

ಸಂಬಂಧಿತ ಸುದ್ದಿ