ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟಿ, ಕೋಟಿ ಖರ್ಚು ಮಾಡಿ ತರಕಾರಿ ಮಾರುಕಟ್ಟೆ ನಿರ್ಮಾಣ, ಲೋಕಾರ್ಪಣೆ ಯಾವಾಗ..?

ವಿಜಯನಗರ: ಹೀಗೆ ಒಂದು ಕಡೆ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ, ಇನ್ನೊಂದು ಕಡೆ ತರಕಾರಿ ಮಾರುಕಟ್ಟೆಯ ಬೃಹತ್ ಕಟ್ಟಡ, ಸಣ್ಣ ಅಂಗಡಿಗಳು ಮಾಡಲಾಗಿರೋ ಕಟ್ಟಡದ ಬಾಗಿಲುಗಳು, ಈ ದೃಶ್ಯಗಳು ಕಂಡು ಬಂದಿದ್ದು ಹೊಸಪೇಟೆಯ ಹೃದಯಭಾಗದಲ್ಲಿ,

ಹೌದು,

ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೃದಯಭಾಗದಲ್ಲಿರೋ ತರಕಾರಿ ಮಾರುಕಟ್ಟೆಗಾಗಿ, ಪರ್ಯಾಯವಾಗಿ ಬೃಹತ್ ಕಟ್ಟಡ ಕೋಟಿ, ಕೋಟಿ ಖರ್ಚು ಮಾಡಿ ಕಟ್ಟಡ ಕಟ್ಟಲಾಗಿದೆ. ಆದರೆ ಲೋಕಾರ್ಪಣೆ ಮಾಡಿಲ್ಲ.

ಕಳೆದ ನಾಲ್ಕು ವರ್ಷಗಳ ಹಿಂದೆ ಭೂಮಿ ಪೂಜೆ ಮಾಡಲಾಗಿತ್ತು. ಸತತ ನಾಲ್ಕು ವರ್ಷಗಳು ಕಳೆದರೂ ಕೂಡ ಲೋಕಾರ್ಪಣೆ ಮಾಡಲಾಗಿಲ್ಲ, ಒಂದಲ್ಲ ಎರಡಲ್ಲ ಬರೋಬ್ಬರಿ 12 ಕೋಟಿ ಖರ್ಚು ಮಾಡಿ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ. ನಿರ್ಮಾಣ ಮಾಡಿರೋ ತರಕಾರಿ ಮಾರುಕಟ್ಟೆಯಲ್ಲಿರೋ ಕೊಠಡಿಗಳು ಸಣ್ಣದಿದ್ದು, ಅಲ್ಲಿ ವ್ಯಾಪಾರ ಮಾಡಲು ಆಗುವುದಿಲ್ಲ ಎನ್ನುತ್ತಾರೆ, ವ್ಯಾಪಾರಸ್ಥರು, ಸರಿಯಾಗಿ ನಿರ್ಮಾಣ ಮಾಡಿಲ್ಲ, ಇದು ಸಮಂಜಸವಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ.

ಒಟ್ಟಿನಲ್ಲಿ ಮಳೆ, ಬಿಸಿಲು, ಗಾಳಿ ಲೆಕ್ಕಿಸದೇ, ಎಲ್ಲವನ್ನೂ ಸಹಿಸಿಕೊಂಡು ವ್ಯಾಪಾರ ಮಾಡುವ, ವ್ಯಾಪಾರಸ್ಥರಿಗೆ ಅನುಕೂಲಕ್ಕಾಗಿ ನಿರ್ಮಾಣ ಮಾಡಿರೋ, ಈ ತರಕಾರಿ ಮಾರುಕಟ್ಟೆ ಲೋಕಾರ್ಪಣೆ ಮಾಡಿ, ಜನರಿಗೆ ಅನುಕೂಲ ಮಾಡಿ ಕೊಡಬೇಕೆಂದು ಜನರ ಒತ್ತಾಯವಾಗಿದೆ.

ಪಾಂಡುರಂಗ ಜಂತ್ಲಿ ಪಬ್ಲಿಕ್ ನೆಕ್ಸ್ಟ್ ವಿಜಯನಗರ.

Edited By : Somashekar
PublicNext

PublicNext

17/06/2026 12:37 pm

Cinque Terre

5.97 K

Cinque Terre

0

ಸಂಬಂಧಿತ ಸುದ್ದಿ