ಹೊಸಪೇಟೆ : ಬಿಡದಿ ಟೌನ್‌ಶಿಪ್ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ - ಬಿಜೆಪಿ ನಡೆ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದ್ದಾರೆ. ಟೌನ್‌ಶಿಪ್ ಹುಟ್ಟುಹಾಕಿದ್ದೇ ಕುಮಾರಸ್ವಾಮಿ. ಆಗ ಶುರು ಮಾಡಿ ಈಗ ವಿರೋಧ ಮಾಡುತ್ತಾರಂದ್ರೆ ಏನು ಹೇಳಬೇಕು.
ವಿರೋಧ ಪಕ್ಷದಲ್ಲಿದ್ದಾರೆ ವಿರೋಧ ಮಾಡ್ತಿದ್ದಾರೆ, ಮಾಡಲಿ ಅಂತ ಗರಂ ಆದರು. ಹೊಸಪೇಟೆಯಲ್ಲಿ ಮಾತನಾಡಿದ ಅವರು, ಅಷ್ಟೇ ಅಲ್ಲದೇ ಟೌನ್‌ಶಿಪ್ ಆರಂಭ ಆಗಿದ್ದು ಹೇಗೆ, ಯೋಜನೆ ಯಾರು ಹುಟ್ಟುಹಾಕಿದರು. ಯಾರ್ಯಾರು ಸಿಎಂ ಆದರು ಅವರವರ ಕಾಲಘಟ್ಟದಲ್ಲಿ ಏನೆಲ್ಲಾ ಡೆವಲಪ್‌ಮೆಂಟ್ ಗಳು ಆದವು ಅನ್ನೋದನ್ನ ಏಳೆಏಳೆಯಾಗಿ ವಿವರಣೆ ನೀಡಿದರು.
ಆಗ ಯೋಜನೆ ಶುರು ಮಾಡಲು ಹೋದವರು ಈಗ ವಿರೋಧ ಮಾಡುತ್ತಿದ್ದಾರೆ ಅಂತ ಆಕ್ರೋಶ ಹೊರಹಾಕಿದರು.
PublicNext
19/06/2026 02:42 pm
LOADING...