ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೂನ್ 25ಕ್ಕೆ ಟಿಬಿ ಡ್ಯಾಂ ಹೊಸ ಕ್ರಸ್ಟ್‌ ಉದ್ಘಾಟನೆ, ಕಾರ್ಯಕ್ರಮ ಸಿದ್ಧತೆ, ಅಧಿಕಾರಿಗಳ ಜೊತೆಗೆ ರಾಮಲಿಂಗಾರೆಡ್ಡಿ ಸಭೆ

ಹೊಸಪೇಟೆ : ಇದೇ ತಿಂಗಳು ಮೂರು ರಾಜ್ಯಗಳ ಸಿಎಂ ಸೇರಿ ಹೊಸ ಕ್ರಸ್ಟ್ ಗೇಟ್ ಗಳ ಲೋಕಾರ್ಪಣೆ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ತುಂಗಭದ್ರಾ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿದ್ರು.

ಟಿಬಿ ಡ್ಯಾಂಗೆ ಭೇಟಿ ನೀಡಿ ಹೊಸ ಗೇಟ್ ಗಳ ಸ್ಥಿತಿಗತಿ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ವೀಕ್ಷಣೆ ಮಾಡಿದ್ರು. 19ನೇ ಕ್ರಸ್ಟ್‌ ಗೇಟ್ ವೀಕ್ಷಿಸಿ ಟಿಬಿ ಬೋರ್ಡ್ ಅಧಿಕಾರಿಗಳಿಂದ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ಪಡೆದ್ರು. ಜೂನ್ 25ರಂದು 33 ಹೊಸ ಕ್ರಸ್ಟ್‌ ಗೇಟ್ ಗಳನ್ನ ಲೋಕಾರ್ಪಣೆ ಮಾಡಲು ನಿರ್ಧರಿಸಲಾಗಿದೆ. ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಮೂರು ರಾಜ್ಯಗಳ ಸಿಎಂಗಳು, ಕೇಂದ್ರ ಜಲಶಕ್ತಿ ಸಚಿವರು ಉದ್ಘಾಟನೆಗೆ ಆಗಮಿಸಲಿದ್ದಾರೆ.

ಹೀಗಾಗಿ ಕಾರ್ಯಕ್ರಮ ಸ್ಥಳ ಸೇರಿದಂತೆ ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಅಧಿಕಾರಿಗಳ ಜೊತೆ ಚರ್ಚಿಸಿದ್ರು.

ಕ್ರಸ್ಟ್ ಉದ್ಘಾಟನೆ ಬಳಿಕ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನಲ್ಲಿ ಜೂನ್ 25ರಂದು ವೇದಿಕೆ ಕಾರ್ಯಕ್ರಮ ನಡೆಯಲಿದೆ.

Edited By : Vinayak Patil
PublicNext

PublicNext

18/06/2026 05:45 pm

Cinque Terre

9.86 K

Cinque Terre

0

ಸಂಬಂಧಿತ ಸುದ್ದಿ