ಹೊಸಪೇಟೆ : ಕರ್ನಾಟಕದಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ಮತ್ತು ಟಾಟಾ ಪವರ್ ಕಂಪನಿ ನೀಡಿದ ಪರವಾನಗಿಯನ್ನು ರದ್ದುಪಡಿಸಬೇಕು ಅಂತ ಮನವಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ನಾಗರಾಜ್ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ರೈತರು ಟಾಟಾ ಪವರ್ ಕಂಪನಿಯವರಿಗೆ ಪರವಾನಗಿ ನೀಡಬಾರದು. ಸರ್ಕಾರದ ನೀತಿಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿರೋಧಿಸುತ್ತದೆ. ಇದು ರೈತರ ಪಂಪ್‌ಸೆಟ್‌ಗಳಿಗೆ ಮಾರಕವಾಗಿದೆ. ಇದರಿಂದ ರೈತಾಪಿ ವಲಯದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಲಿದೆ. ಹೀಗಾಗಿ ಟಾಟಾ ಪವರ್ ಕಂಪನಿಗೆ ಅನುಮತಿ ನೀಡಿದ್ದನ್ನು ರದ್ದು ಮಾಡಬೇಕು. ಒಂದು ವೇಳೆ ರೈತರ ವಿಚಾರದಲ್ಲಿ ವಿದ್ಯುತ್ ಖಾಸಗೀಕರಣ ಆಗಿದ್ದೇ ಆದರೆ ಕರ್ನಾಟಕದಾದ್ಯಂತ ಬಂದ್‌ಗೆ ಕರೆ ಕೊಡುವುದರ ಮೂಲಕ, ಕರ್ನಾಟಕ ಸರ್ಕಾರದ ವಿರುದ್ಧ ಬಾರು ಕೋಲು ಚಳುವಳಿ ಮಾಡಿ ಉಗ್ರವಾದ ಹೋರಾಟ ಮಾಡುತ್ತೇವೆ ಅಂತ ಸರ್ಕಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಎಚ್ಚರಿಕೆ ನೀಡಿದರು.
PublicNext
18/06/2026 02:00 pm
LOADING...