ಹೊಸಪೇಟೆ : ಶಾಸಕರಾಗಿರುವ ಹಿರಿಯ ರಾಜಕಾರಣಿ, ಮೊಳಕಾಲ್ಮೂರು ಶಾಸಕರ ಎನ್ ವೈ ಗೋಪಾಲಕೃಷ್ಣಗೆ ಮಂತ್ರಿ ಸ್ಥಾನ ಕೊಡಿ ಅಂತ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಶಾಸಕ ಶ್ರೀನಿವಾಸ್ ದುಂಬಾಲು ಬಿದ್ದಿದ್ದಾರೆ. ತಮ್ಮ ಕ್ಷೇತ್ರದ ಕಾಂಗ್ರೆಸ್ ಲೀಡರ್ ಗಳನ್ನ ಬೆಂಗಳೂರಿಗೆ ಕರೆದೋಯ್ದು ಸಿಎಂ ಡಿಕೆ ಶಿವಕುಮಾರ್ ರನ್ನ ಭೇಟಿ ಮಾಡಿ ಪಟ್ಟು ಹಿಡಿದಿದ್ದಾರೆ. ಗೋಪಾಲಕೃಷ್ಣ ಏಳು ಬಾರಿ ಶಾಸಕ ಆಗಿದ್ದಾರೆ. ಹೀಗಾಗಿ ಹಿರಿತನ ಪರಿಗಣಿಸಿ ಮಂತ್ರಿ ಸ್ಥಾನ ಕೊಡಿ ಅಂತ ಮನವಿ ಮಾಡಿದರು. ಅದಕ್ಕೆ ಉತ್ತರಿಸಿದ ಸಿಎಂ ಡಿಕೆ ಶಿವಕುಮಾರ್, ಮಂತ್ರಿ ಮಾಡುವುದು ಹೈಕಮಾಂಡ್ ನಾನಲ್ಲ ಎನ್ನುತ್ತಾ, ಆಯ್ತು ಮಾಡೋಣ ಬಿಡಿ ಅಂತ ಹೇಳಿದರು.
PublicNext
19/06/2026 02:38 pm
LOADING...