ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ: 4 ವರ್ಷದಿಂದ ನನೆಗುದಿಗೆ ರೈಲ್ವೇ ಸೇತುವೆ: ಸ್ಥಳೀಯರ ಆಕ್ರೋಶ ಭುಗಿಲು!

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಅನಂತಶಯನಗುಡಿ ಗ್ರಾಮದ ಬಳಿ ಹಾಯ್ದು ಹೋಗುವ ರೈಲ್ವೇ ಹಳಿಗೆ ಅಡ್ಡಲಾಗಿ ನಿರ್ಮಾಣ ಆಗುತ್ತಿರುವ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿ ನಾಲ್ಕು ವರ್ಷ ಕಳೆದರೂ ಕಾಮಗಾರಿ ಕಂಪ್ಲೀಟ್ ಆಗುತ್ತಿಲ್ಲ. ಕೇವಲ ಒಂಬತ್ತು ತಿಂಗಳಲ್ಲಿ ಕಂಪ್ಲೀಟ್ ಆಗಬೇಕಿದ್ದ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿರುವುದರಿಂದ ವಾಹನ ಸವಾರರು ನಿತ್ಯ ಗೋಳಾಡಬೇಕಾಗಿರುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಅನಂತಶಯನ ಗುಡಿ ಗ್ರಾಮದ ಪ್ರಮುಖ ರಸ್ತೆ ವಿಶ್ವ ವಿಖ್ಯಾತ ಹಂಪಿ, ಕಂಪ್ಲಿ, ಬಳ್ಳಾರಿ ಸೇರಿ ಹತ್ತಾರು ಜಿಲ್ಲೆಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ನಿತ್ಯ 24 ಗಂಟೆಯಲ್ಲಿ 18 ಗಂಟೆ ರೈಲ್ವೇ ಗೇಟ್ ಕ್ಲೋಸ್ ಆಗುತ್ತದೆ. ಈ ಕಿರಿಕಿರಿ ತಪ್ಪಿಸಲು ರಾಜ್ಯ, ಕೇಂದ್ರ ಸರ್ಕಾರ 60:40 ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಹಿಂದೆ ಕಾಮಗಾರಿ ಉದ್ಘಾಟನೆ ವೇಳೆ ಕೇವಲ ಒಂದೇ ವರ್ಷದಲ್ಲಿ ಬ್ರಿಡ್ಜ್ ನಿರ್ಮಾಣ ಗುರಿ ಹೊಂದಲಾಗಿತ್ತು. ಆದ್ರೀಗ ನಾಲ್ಕು ವರ್ಷ ಕಳೆದರೂ ಬ್ರಿಡ್ಜ್ ನಿರ್ಮಾಣ ಕೆಲಸ ನಡೆಯುತ್ತಲೇ ಇದೆ. ಹೀಗಾಗಿ ಒಂದು ಬಾರಿ ರೈಲ್ವೇ ಗೇಟ್ ಕ್ಲೋಸ್ ಆದರೆ ಕಿಮೀ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಹೀಗಾಗಿ ಆದಷ್ಟು ಬೇಗ ಬ್ರಿಡ್ಜ್ ಕಾಮಗಾರಿ ಕಂಪ್ಲೀಟ್ ಮಾಡಿ ಜನರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಅಂತ ಸ್ಥಳೀಯರು ಆಗ್ರಹಿಸಿದ್ದಾರೆ.

Edited By : Somashekar
PublicNext

PublicNext

16/06/2026 02:22 pm

Cinque Terre

7.58 K

Cinque Terre

0

ಸಂಬಂಧಿತ ಸುದ್ದಿ