ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರದಲ್ಲಿ ಜೋರಾದ ಜಮೀನು ಕಬಳಿಕೆ ಆರೋಪ!

ಕೋಲಾರ: ಕೋಲಾರದ ಮಾಲೂರಿನಲ್ಲಿ ಇತ್ತೀಚೆಗೆ ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಆರೋಪಗಳು ಸರಣಿಯಾಗಿ ಬೆಳಕಿಗೆ ಬರುತ್ತಿದೆ, ಇದೀಗ ಮತ್ತೊಮ್ಮೆ ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಿರುವ ಸಾಮಾಜಿಕ ಹೋರಾಟಗಾರ ಸಿದ್ದಾರ್ಥ್ ಆನಂದ್, ಮಾಲೂರು ಗ್ರಾಮದ ಸರ್ವೇ ನಂಬರ್ 112 ರಲ್ಲಿನ 1.20 ಎಕರೆ ಜಮೀನು ಅಕ್ರಮವಾಗಿ ಮಂಜೂರಾಗಿದೆಯೆಂದು ಆರೋಪಿಸಿ, ಪ್ರಕರಣದ ತನಿಖೆ ನಡೆಸಲು ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

1976 ರಲ್ಲಿ ಜಮೀನು ಮಂಜೂರು ಆಗಿರುವಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸರ್ಕಾರಿ ರಜೆ ದಿನಗಳಲ್ಲಿ ಜಮೀನು ಟಿಪ್ಪಣಿ, ಅಧಿಕೃತ ಜ್ಞಾಪನ ಪತ್ರ ನೀಡಿರುವುದು ದಾಖಲೆಗಳಲ್ಲಿದೆ, ಆದರೂ ಜಮೀನು ಮಾರಾಟ ಮಾಡಲಾಗಿದೆ, ಜಮೀನಿನ ಖಾತೆ ಮಾಡದಂತೆ ತಕರಾರು ಅರ್ಜಿಯನ್ನು ಸುಬ್ರಮಣಿ ಹಾಗೂ ಸಿದ್ದಾರ್ಥ್ ಆನಂದ್ ಸಲ್ಲಿಕೆ ಮಾಡಿದ್ದರು, ತಹಶಿಲ್ದಾರ್ ಇದ್ಯಾವುದನ್ನು ಪರಿಗಣಿಸದೆ ಖಾತೆ ಮಾಡಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ, ಈ ಸಂಬಂಧ ಮಾಲೂರು ಕಸಬಾ ಆರ್. ಐ ಅರುಣ್ ವರದಿ ನೀಡಿದ್ದರು, ಕಾನೂನು ಬಾಹಿರವಾಗಿ ಜಮೀನು ಖಾತೆ ಮಾಡಿದ್ದು, ತಹಶಿಲ್ದಾರ್ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಹೋರಾಟಗಾರ ಸಿದ್ದಾರ್ಥ್ ಆನಂದ್ ಆಗ್ರಹಿಸಿದ್ದಾರೆ.

Edited By : Vinayak Patil
PublicNext

PublicNext

15/06/2026 07:59 am

Cinque Terre

15.31 K

Cinque Terre

0