ಕೋಲಾರ : ಜಿಲ್ಲೆಯಿಂದ ಗಡಿ ಪಾರಾಗಿದ್ದ ರೌಡಿ ಶೀಟರ್ ಗುಂಪು ಕಟ್ಟಿಕೊಂಡು ಬಾರ್‌ಗಳ ಮೇಲೆ ದಾಳಿ ಮಾಡಿ ದಾಂಧಲೆ ನಡೆಸಿರುವ ಘಟನೆ, ಜಿಲ್ಲೆಯ ಮಾಲೂರಿನ ತಾಲ್ಲೂಕಿನ ಮಾಸ್ತಿ ಹೋಬಳಿಯ ತೊರಲಕ್ಕಿ ಗ್ರಾಮದಲ್ಲಿ ಸೋಮವಾರ ರಾತ್ರಿ ಜರುಗಿದೆ.
ರೌಡಿ ಶೀಟರ್ ಅಣಿಕರಹಳ್ಳಿಯ ವಿಶ್ವನಾಥ್, ಪ್ರತಾಪ್ ಗೌಡ ಗಡಿಪಾರಾಗಿದ್ದು, ತಮ್ಮ ಸಹಚರರಾದ ಭೂ ಚಂದ್ರ, ಬಾಲಾಜಿ, ಚಿಕ್ಕದಾನವಹಳ್ಳಿ ಮುರುಗೇಶ್, ಪೆಮ್ಮದೊಡ್ಡ ನರಸಿಂಹ ಸೇರಿ ಬಾರ್‌ಗಳಿಗೆ ಭೇಟಿ ನೀಡಿ, ಉಚಿತವಾಗಿ ಮದ್ಯ ನೀಡುವಂತೆ ಒತ್ತಾಯಿಸಿದ್ದಾರೆ.
ಇದಕ್ಕೆ ಬಾರ್ ಸಿಬ್ಬಂದಿ ನಿರಾಕರಿಸಿದ್ದು, ಮುಖಕ್ಕೆ ಮಾಸ್ಕ್ ಧರಿಸಿರುವ ಪುಂಡರು ದಾಂಧಲೆ ನಡೆಸಿದ್ದು, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಮಾಸ್ತಿಯ ಎಂ.ಎಸ್.ಬಾರ್, ಬೇರಿಕೆಯ ಗಡಿಯ ಗಂಗಸಂದ್ರ ಬಳಿಯ ತಿರುಮಲ ರೆಸಿಡೆನ್ಸಿ ಬಾರ್ ಹಾಗೂ ತೊರಲಕ್ಕಿ ಬಳಿಯ ಬಾರ್ ಸೇರಿ ಮೂರು ಬಾರ್‌ಗಳ ಮೇಲೆ ದಾಳಿ ಮಾಡಿದ್ದಾರೆ. ಬಾರ್ ದಾಂಧಲೆ ಮಾಡಿ, ಬಾರ್ ಧ್ವಂಸ ಮಾಡುವ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಿಯರ್ ಬಾಟಲಿ ಹಿಡಿದು ಮನಸೋಇಚ್ಛೆ ಬಾರ್‌ಗಳಲ್ಲಿ ದಾಂಧಲೆ ಮಾಡಿ ಬಾರ್‌ಗಳಲ್ಲಿದ್ದ ಮದ್ಯ ನಾಶ ಮಾಡಿದ್ದಾರೆ.ಈ ಕೃತ್ಯದಲ್ಲಿ ಇಬ್ಬರು ಭಾಗಿಯಾಗಿರುವವರು ಬೆಂಗಳೂರಿನ ಭಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದವರಾಗಿದ್ದು, ಜಾಮೀನಿನ ಮೇಲೆ ಹೊರಬಂದಿರುವುದಾಗಿ ತಿಳಿದು ಬಂದಿದೆ. ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
PublicNext
09/06/2026 08:57 pm
LOADING...