ಮೇಷ: ಮನಸ್ಥೈರ್ಯ ಪ್ರಾಪ್ತಿಗೆ ಪ್ರಾರ್ಥನೆಯ ಸಹಾಯ. ದೈಹಿಕ, ಬೌದ್ಧಿಕ ಕಾರ್ಯಗಳ ಒತ್ತಡ. ಉದ್ಯೋಗ, ಉದ್ಯಮಗಳಲ್ಲಿ ಸಾಮಾನ್ಯ ತೃಪ್ತಿ. ಆವಶ್ಯಕತೆಗೆ ತಕ್ಕ ನೆರವು ಸಕಾಲದಲ್ಲಿ ಲಭ್ಯ.
ವೃಷಭ: ಉದ್ಯೋಗದಲ್ಲಿ ಹೆಚ್ಚು ಸಂತೃಪ್ತಿ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಆಮಿಷದ ಬಲೆ. ಉದ್ಯಮಗಳಲ್ಲಿ ಉತ್ಪಾದನೆ ಹೆಚ್ಚಳ. ಅವಕಾಶಗಳ ಸದುಪಯೋಗದಿಂದ ಶುಭ.
ಮಿಥುನ: ಯಶಸ್ಸಿನ ಕುರಿತು ಸಂಶಯ ಬೇಡ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯ ಸೂಚನೆ. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣದ ಸಾಧ್ಯತೆ. ಅಸ್ವಸ್ಥರಿಗೆ ಮನಸ್ಥೈರ್ಯ ತುಂಬಲು ಪ್ರಯತ್ನ.
ಕರ್ಕಾಟಕ: ಯಥಾಸ್ಥಿತಿ ಮುಂದುವರಿಯುವ ಸಾಧ್ಯತೆ. ಉತ್ಪಾದನೆಗಳಲ್ಲಿ ವೈವಿಧ್ಯಕ್ಕೆ ಪ್ರಾಶಸ್ತ್ಯಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ. ದೀರ್ಘಾವಧಿ ಹೂಡಿಕೆಗಳಿಂದ ಲಾಭ.
ಸಿಂಹ: ಸರಕಾರಿ ಉದ್ಯೋಗಿಗಳಿಗೆ ನಿರಾಳ. ಹೊಸ ಪರಿಚಯಸ್ಥರ ಸಹಾಯದಿಂದ ವ್ಯಾಪಾರ ವೃದ್ಧಿ. ಕಟ್ಟಡ ನಿರ್ಮಾಣ ಕಾರ್ಯ ವೇಗ ವೃದ್ಧಿ. ಕೃಷ್ಯುತ್ಪನ್ನದಿಂದ ಆದಾಯ ಹೆಚ್ಚಳ.
ಕನ್ಯಾ: ಮನೆಯಲ್ಲಿ ಶಾಂತಿ, ವ್ಯವಹಾರದಲ್ಲಿ ಯಶಸ್ಸು. ಆತ್ಮೀಯರ ಭೇಟಿಯಿಂದ ಹರ್ಷ. ಉದ್ಯೋಗ ಸ್ಥಾನದಲ್ಲಿ ಹೆಚ್ಚು ಸೌಲಭ್ಯ ಉದ್ಯೋಗಾಸಕ್ತರಿಗೆ ಆಶಾದಾಯಕ ಅವಕಾಶಗಳು.
ತುಲಾ: ವಿದ್ವಾನ್ ಸರ್ವತ್ರ ಪೂಜ್ಯತೇ ಎಂಬುದು ಸತ್ಯ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಗೃಹಾಲಂಕಾರಕ್ಕೆ ಧನವ್ಯಯ. ಕುಶಲಕರ್ಮಿಗಳ ಜನಪ್ರಿಯತೆ ವೃದ್ಧಿ.
ವೃಶ್ಚಿಕ: ಧಾರ್ಮಿಕ ಚಿಂತನೆಯಿಂದ ಆನಂದ. ಉದ್ಯಮದ ವ್ಯಾಪ್ತಿ ಇನ್ನಷ್ಟು ವಿಸ್ತರಣೆ ಸಂಸ್ಥೆಯಲ್ಲಿ ಇನ್ನಷ್ಟು ಹೊಣೆಗಾರಿಕೆ. ಉತ್ಪನ್ನಗಳ ಗುಣಮಟ್ಟಕ್ಕೆ ಜನರಿಂದ ಶ್ಲಾಘನೆ.
ಧನು: ಪರಿಸ್ಥಿತಿಗೆ ಹೊಂದಿಕೊಳ್ಳುವ ಪ್ರಯತ್ನ. ಉದ್ಯೋಗ ಸ್ಥಾನದಲ್ಲಿ ಸದಭಿಪ್ರಾಯಕ್ಕೆ ಪಾತ್ರರಾಗುವಿರಿ. ಸಣ್ಣ ಉದ್ಯಮಗಳ ಅಭಿವೃದ್ಧಿ. ಹೈನುಗಾರಿಕೆ, ಜೇನು ವ್ಯವಸಾಯದಲ್ಲಿ ಆಸಕ್ತಿ.
ಮಕರ: ಉದ್ಯೋಗ ಸ್ಥಾನದಲ್ಲಿ ಗೌರವ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ನಿವೇಶನ ಖರೀದಿ- ಮಾರಾಟ ವ್ಯವಹಾರಸ್ಥರಿಗೆ ಲಾಭ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ.
ಕುಂಭ: ಲಾಭದಾಯಕ ಯೋಜನೆಗಳಲ್ಲಿ ಹೂಡಿಕೆ. ಉದ್ಯಮದಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ದೂರದಲ್ಲಿರುವ ಬಂಧುಗಳ ಭೇಟಿ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ.
PublicNext
16/06/2026 08:28 am