ಬಳ್ಳಾರಿ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಕಳಪೆ ನಡೆದಿದೆ ಅಂತ ಆರೋಪಿಸಲಾಗಿತ್ತು.
ಇದರ ಭಾಗವಾಗಿ ಕಳಪೆ ಕಾಮಗಾರಿ ಪ್ರಶ್ನಿಸಿದವರನ್ನು ವಿರುದ್ಧ ಸಂಸದ ತುಕಾರಾಂ ಅಶ್ಲೀಲ ಪದ ಬಳಕೆ ಮಾಡಿ ಮುಂಡೆ ಮಕ್ಕಳು, ಸಂವಿಧಾನದ ಗಂಧ ಗಾಳಿ ಗೊತ್ತಿಲ್ಲ ಎಂದು ಬೈದಿದ್ದರು. ಇದನ್ನು ವಿರೋಧಿಸಿ ಬಳ್ಳಾರಿ ಜಿಲ್ಲಾ ಬಿಜೆಪಿ ವತಿಯಿಂದ ಸಂಸದ ತುಕಾರಾಂ ಪ್ರತಿಕೃತಿ ದಹಿಸಿ ಬಳ್ಳಾರಿಯಲ್ಲಿ ಆಕ್ರೋಶ ಹೊರಹಾಕಲಾಯಿತು.
ಬಿಜೆಪಿ ಜಿಲ್ಲಾ ಘಟಕದಿಂದ ಬೃಹತ್ ಪ್ರತಿಭಟನೆ ವೇಳೆ ಸಂಸದ ತುಕಾರಾಂ ಹಾಗೂ ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿದರು. ಸಂಸದ ತುಕಾರಾಂ ರಾಜೀನಾಮೆ ನೀಡಬೇಕು. ಬಳ್ಳಾರಿಯ ರಾಯಲ್ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಜನರಿಂದ ಆಯ್ಕೆಯಾದ ಸಂಸದರು ಕಳಪೆ ಕಾಮಗಾರಿ ಪ್ರಶ್ನೆ ಮಾಡಿದ್ದಕ್ಕೆ ಮುಂಡೆ ಮಗ ಎನ್ನುತ್ತಾರೆ. ಸಂಸದ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
PublicNext
17/06/2026 08:08 am
LOADING...