ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಕುಡುತಿನಿ ಪಟ್ಟಣದ ಬಸವೇಶ್ವರ ಸ್ಪೋರ್ಟ್ಸ್ ರಿಕ್ರಿಯೆಷನ್ ಅಸೋಸಿಯೇಷನ್ ಕ್ಲಬ್, ಗುರುರಾಯರ ರಿಕ್ರಿಯೆಷನ್ ಅಸೋಸಿಯೇಷನ್ ಕ್ಲಬ್ ಗಳಲ್ಲಿ ಮನೋರಂಜನಾ ಕ್ರೀಡೆ/ಚಟುವಟಿಕೆಗಳ ಹೆಸರಿನಲ್ಲಿ ಕಾನೂನು ಬಾಹಿರವಾಗಿ ನಗದು ಹಣದ ಬದಲಾಗಿ ಪ್ಲಾಸ್ಟಿಕ್ ಕಾಯಿನ್ ಗಳ ಮೂಲಕ ಇಸ್ಪೀಟು ಜೂಜಾಟ ಆಡುತ್ತಿದ್ದ ಸ್ಥಳದ ಮೇಲೆ ಕುರಗೋಡು ಪೊಲೀಸರು ದಾಳಿ ನಡೆಸಿದ್ದಾರೆ.
ಘಟನೆ ಬಗ್ಗೆ ಕುಡತಿನಿ ಪೊಲೀಸ್ ಠಾಣೆಯಲ್ಲಿ, ಬಸವೇಶ್ವರ ಸ್ಪೋರ್ಟ್ಸ್ & ರಿಕ್ರಿಯೆಷನ್ ಅಸೋಸಿಯೇಷನ್ ಕ್ಲಬ್ ವಿರುದ್ಧ, 87/2026 U/s-79,80, ಗುರುರಾಯರ ರಿಕ್ರಿಯೆಷನ್ ಅಸೋಸಿಯೇಷನ್ ಕ್ಲಬ್ ವಿರುದ್ಧ 88/2026 U/s-79,80 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶ್ರೀ ಬಸವೇಶ್ವರ ಸ್ಪೋರ್ಟ್ಸ್ & ರಿಕ್ರಿಯೆಷನ್ ಅಸೋಸಿಯೇಷನ್ ಕ್ಲಬ್ ನಿಂದ ರೂ 1,24,577 ರೂಪಾಯಿ ಹಣ, 21 ವಿವಿಧ ಕಂಪನಿಯ ಮೊಬೈಲ್ ವಶಕ್ಕೆ ಪಡೆದಿದ್ದು, 24 ಜನ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಶ್ರೀ ಗುರುರಾಯರ ರಿಕ್ರಿಯೆಷನ್ ಅಸೋಸಿಯೇಷನ್ ಕ್ಲಬ್‌ನಿಂದ ರೂ 90,025/- ನಗದು ಹಣ, 39 ವಿವಿಧ ಕಂಪನಿಯ ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, 45 ಜನ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 2,14,602/- ಹಣ, 40 ಮೊಬೈಲ್‌ಗಳನ್ನು ಜಪ್ತುಪಡಿಸಿಕೊಂಡು, 69 ಜನ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಎರಡು ರಿಕ್ರಿಯೆಷನ್ ಕ್ಲಬ್‌ಗಳನ್ನು ಮುಚ್ಚಿಸಲಾಗಿದೆ. ಎರಡು ಕ್ಲಬ್ ಗಳ ಪರವಾನಿಗೆಗಳನ್ನು ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
Kshetra Samachara
12/06/2026 10:09 pm
LOADING...