ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲೂಕಿನ ಕೌಲ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆದಿದ್ದ ಪ್ರಕರಣವನ್ನ ಪೊಲೀಸರು ಕಳ್ಳತನ ಆಗಿದ್ದ ಮಾಲು ಸಮೇತ ಕಳ್ಳರನ್ನ ಹೆಡೆಮುರಿ ಕಟ್ಟಿದ್ದಾರೆ.
ಬಂಧಿತ ಖದೀಮರನ್ನ ಅನಿಲ್ ಕುಮಾರ್ ನಾಯ್ಕ ತಂದೆ ಶಂಕರ್ ನಾಯ್ಕ, ಜಾನೇಕುಂಟೆ ತಾಂಡ ಗ್ರಾಮ, ಮಲ್ಲಿಕಾರ್ಜುನ ನಾಯ್ಕ @ ಲಂಬಾಣಿ ಮಲ್ಲಿನಾಯಕ್ @ ಲಂಬಾಣಿ ಮಲ್ಲಿ ತಂದೆ ರಾಮಾನಾಯ್ಕ, ಜಾನೆಕುಂಟೆ ತಾಂಡಾದ ನಿವಾಸಿಗಳು ಅಂತ ಗುರುತಿಸಲಾಗಿದೆ.
ಇನ್ನೊಬ್ಬ ಖದೀಮ ನಗರದ ಮಹಾತ್ಮ ಗಾಂಧಿ ಸ್ಕೂಲ್ ಬಳಿಯ ಬಂಡಿಹಟ್ಟಿ ಏರಿಯಾದ ವ್ಯಕ್ತಿಯನ್ನು ದಸ್ತಗಿರಿ ಮಾಡಿ, ವಿಚಾರಣೆಗೆ ಒಳಪಡಿಸಲಾಗಿದೆ.ಬಂಧಿತ ಪ್ರಕರಣ ಪತ್ತೆ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 15,90,000/- ಮೌಲ್ಯದ 159 ಗ್ರಾಂ ಬಂಗಾರದ ಆಭರಣಗಳು, 70,000/- ಮೌಲ್ಯದ 350 ಗ್ರಾಂ ಬೆಳ್ಳಿಯ ಆಭರಣಗಳು ಮತ್ತು ರೂ 20,000/- ನಗದು ಹಣ ಸೇರಿದಂತೆ ಒಟ್ಟು 16,80,000 ರೂ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
Kshetra Samachara
05/06/2026 06:57 pm
LOADING...