ಹಾನಗಲ್: ಬೆಂಗಳೂರಿನಲ್ಲಿದ್ದ ನಮ್ಮೂರು ನಮ್ಮವರು ನಕಲಿ ಹೋರಾಟ ತಂಡದ ರೂವಾರಿಯೊಬ್ಬರು ಇದೀಗ ಹಾನಗಲ್ ತಾಲೂಕಿಗೆ ಬಂದು ರಾಜಕೀಯ ಬೇಳೆ ಬೇಯಿಸಿ ಕೊಳ್ಳಲು ತಮ್ಮನ್ನು ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಶಾಸಕ ಶ್ರೀನಿವಾಸ ಮಾನೆ ಗುಡುಗಿದರು.
ಇಲ್ಲಿನ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ನಮ್ಮೂರು ನಮ್ಮವರು ನಕಲಿ ಹೋರಾಟಗಾರರು ಎಷ್ಟು ಜನರ ಜೀವ ಉಳಿಸಿದ್ದಾರೆ ಎನ್ನುವುದನ್ನು ಹೇಳಲಿ. ಸರ್ಕಾರಿ ಶಾಲೆಗಳಿಗೆ, ಕಲಿಯುವ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದರೆ ತಿಳಿಸಲಿ. ಜನರ ಕಷ್ಟಕ್ಕೆ ಸ್ಪಂದಿಸದೇ ತಮ್ಮ ತಪ್ಪು ಮುಚ್ಚಿಕೊಳ್ಳಲು ಅನ್ಯದಾರಿ ಹಿಡಿದಿರುವ ಇವರಿಗೆ ನನ್ನ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ತಿರುಗೇಟು ನೀಡಿದರು. ಇನ್ನೂ ಸಂದೀಪ ಪಾಟೀಲ ಹೆಸರು ಎಲ್ಲೂ ಉಲ್ಲೇಖಿಸದೇ ಕಾನೂನು ಪಂಡಿತರು, ಅತೀ ವಿದ್ಯಾವಂತ ಅಪ್ರಬುದ್ಧ ಎನ್ನುತ್ತಾ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ಹೊತ್ತಿನಲ್ಲಿ ಒಂದು ಹಾಡಿನ ಚಿತ್ರೀಕರಣ ಮಾಡಿರುವುದು ಸರಿಯೇ? ಯಾವ ಪುರಷಾರ್ಥಕ್ಕೆ ವಿಡಿಯೋ ಮಾಡಲಾಯಿತು. ಆಸ್ಪತ್ರೆಯ ಬೆಡ್, ಆಕ್ಸಿಜನ್, ವೈದ್ಯರ ಆಸನ ಹೀಗೆ ಎಲ್ಲವನ್ನೂ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹಾಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತನಿಖೆಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಚಿತ್ರೀಕರಣದ ಸಂದೇಶ ಯಾರಿಗೂ ಭಯ ಹುಟ್ಟಿಸುವ ಸಂದೇಶವಾಗುವುದು ಬೇಡ. ಜಾಗೃತಿ ಮೂಡಿಸಲಿ. ವೈದ್ಯರನ್ನು ವಿಲನ್ ಆಗಿ ಬಿಂಬಿಸಿರುವುದು ಸರಿಯೇ? ಎಂದು ಖಾರವಾಗಿ ಪ್ರಶ್ನಿಸಿದರು.
ಲೋಕೇಶ್ ಸುಣಗಾರ್, ಪಬ್ಲಿಕ್ ನೆಕ್ಸ್ಟ್, ಹಾನಗಲ್
PublicNext
17/06/2026 03:09 pm
LOADING...