ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿರೋಧಿ ದೇಶ ಪಾಕಿಸ್ತಾನವನ್ನು ಹಾಡಿ ಹೊಗಳಿದ ಶಿಗ್ಗಾವಿ ಶಾಸಕ ಯಾಸೀರ್ ಖಾನ್ ಪಠಾಣ್..

ಶಿಗ್ಗಾವಿ : ಶಿಗ್ಗಾವಿ ಸವಣೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಯಾಸೀರ್ ಖಾನ್ ಪಠಾಣ್ ಸದಾ ಒಂದಿಲ್ಲೊಂದು ವಿವಾದದ ಸುದ್ದಿಯಲ್ಲಿ ಇರುತ್ತಾರೆ ಅದೇ ರೀತಿ ಕಾರ್ಯಕ್ರಮ ಒಂದರಲ್ಲಿ ಪಾಕಿಸ್ತಾನ ನಮ್ಮ ವಿರೋಧಿ ದೇಶವಲ್ಲ ಎಂದು ಮಾತನಾಡಿದ್ದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ,

ಹೌದು ಭಾರತ ದೇಶದ ವಿರೋಧಿ ದೇಶ ಯಾವುದು ಎಂದರೆ ಪಾಕಿಸ್ತಾನ ಎಂದು ಚಿಕ್ಕ ಮಕ್ಕಳಿಗೆ ಕೇಳಿದರು ಹೇಳುತ್ತಾರೆ ಅಂತಹದರಲ್ಲಿ ಶಿಗ್ಗಾವಿ ಸವಣೂರು ಶಾಸಕ ಯಾಸೀರ್ ಖಾನ್ ಪಠಾಣ್ ಬಂಕಾಪುರ ಪಟ್ಟಣದ ಕಾಲೇಜು ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡುವ ಭರದಲ್ಲಿ ವಿರೋಧಿ ದೇಶವನ್ನು ನಮ್ಮ ವಿರೋಧಿ ದೇಶ ಪಾಕಿಸ್ತಾನ ಅಲ್ಲ ಎಂದಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ.

Edited By : Manjunath H D
PublicNext

PublicNext

20/06/2026 06:32 pm

Cinque Terre

12.18 K

Cinque Terre

9

ಸಂಬಂಧಿತ ಸುದ್ದಿ