ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾನಗಲ್:ನಾನು ಈ ಊರಿನವನೇ ಜನ ಒಂದು ಬಾರಿಯಲ್ಲ, ಎರಡು ಬಾರಿ ತೀರ್ಮಾನ ನೀಡಿದ್ದಾರೆ.. ಶಾಸಕ ಶ್ರೀನಿವಾಸ್ ಮಾನೆ

ಹಾನಗಲ್ : ನಾನು ಹೊರಗಿನವನು ಈಗ ಬಂದಿರುವವರು ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕೆ ಅನಾವಶ್ಯಕ ರಾಜಕಾರಣ ಮಾಡುತ್ತಾ ಲಾಭ ಹುಡುಕುತ್ತಿದ್ದಾರೆ.ಅನಾವಶ್ಯಕವಾಗಿ ಎಫ್ ಐ ಆರ್ ಮಾಡಿಸಿದ್ದಾರೆ ಎಂದು ಆರೋಪ ಮಾಡಬೇಡಿ ಎಂದು ಶ್ರೀನಿವಾಸ್ ಮಾನೆ ಹೇಳಿದರು.

ಇಲ್ಲಿನ ತಮ್ಮ ಜನ ಸಂಪರ್ಕ ಕಚೇರಿಯಲ್ಲಿ ಮಾಧ್ಯಮದ ಮೂಲಕ ನಮ್ಮೂರು ನಮ್ಮವರು ಗಮನ ಸೆಳೆಯುವಂತೆ ಮಾತನಾಡಿದ ಅವರು, ಹಾಡಿನ ವಿಡಿಯೋ ಪ್ರಸಾರ ತಡೆ ಹಿಡಿಯುವ ಕೆಲಸವಾಗಲಿ, ನಿಮ್ಮ ಧ್ವನಿ ಹತ್ತಿಕ್ಕುವುದಾಗಲಿ ನಾವು ಮಾಡಿಲ್ಲ. ನಾನು ಈ ಊರಿನವನೇ. ಜನ ಒಂದು ಬಾರಿಯಲ್ಲ, ಎರಡು ಬಾರಿ ತೀರ್ಮಾನ ನೀಡಿದ್ದಾರೆ. ಇನ್ನೂ ಹೆಚ್ಚು ಕೆಲಸ ಮಾಡಲು 3 ನೇ ಬಾರಿಯೂ ಅವಕಾಶ ಕೊಡುವ ರೀತಿ ಕೆಲಸ ಮಾಡುತ್ತಿದ್ದೇನೆ. ನನ್ನ ಕೆಲಸದ ಮೇಲೆ ಜನ ವಿಶ್ವಾಸ ಇಟ್ಟಿದ್ದಾರೆ.

ಪ್ರೀತಿ ಇಟ್ಟಿರುವ ಹಾನಗಲ್ ಜನರ ಋಣ ತೀರಿಸಲು ಬದ್ಧನಿದ್ದೇನೆ. ಅವರ ಬಳಿ ಬರ್ತ್ ಸರ್ಟಿಫಿಕೇಟ್ ಇರಬಹುದು, ನನ್ನ ಬಳಿ ಜನರ ಸರ್ಟಿಫಿಕೇಟ್ ಇದೆ ಅಷ್ಟು ಸಾಕು, ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಲೋಕೇಶ್ ಸುಣಗಾರ್ ಪಬ್ಲಿಕ್ ನೆಕ್ಸ್ಟ್ ಹಾನಗಲ್

Edited By :
PublicNext

PublicNext

17/06/2026 07:03 pm

Cinque Terre

11.18 K

Cinque Terre

0

ಸಂಬಂಧಿತ ಸುದ್ದಿ