ಬೆಂಗಳೂರು: ಧರ್ಮಸ್ಥಳದ ಬುರುಡೆ ಪ್ರಕರಣ ಮತ್ತೆ ಸದ್ದು ಮಾಡ್ತಿತ್ತು ಈ ಬಾರಿ ನಟ ಪ್ರಕಾಶ್ ರಾಜ್ ಹೆಸ್ರು ಕೂಡ ಕೇಳಿ ಬರ್ತಿದೆ. ಚಿನ್ನಯ್ಯ ತನ್ನ ಹೇಳಿಕೆಯಲ್ಲಿ ಪ್ರಕಾಶ್ ರಾಜ್ ನನ್ನನ್ನ ತಬ್ಬಿಕೊಂಡು ಮುತ್ತು ಕೊಡೋದಾಗಿ ಹೇಳಿದ್ರು ಅನ್ನೋ ವಿಚಾರಕ್ಕೆ
ನಟ ಪ್ರಕಾಶ್ ರಾಜ್ ಧರ್ಮಸ್ಥಳ ಪ್ರತಿಕ್ರಿಯಿಸಿದ್ದಾರೆ. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದು, ಧರ್ಮಸ್ಥಳ ಪ್ರಕರಣದಲ್ಲಿ ಚಿನ್ನಯ್ಯ ಎಂಬಾತ ನ್ಯಾಯಾಲಯದಲ್ಲಿ ಪ್ರಕಾಶ್ ರಾಜ್ ಕರೆ ಮಾಡಿದ್ದರು ಎಂದು ಹೇಳಿಕೆ ನೀಡಿರುವುದನ್ನು ಅವರು ತಳ್ಳಿಹಾಕಿದರು. ಗಿರೀಶ್ ಮಟ್ಟಣ್ಣನವರ್ ಹೇಳಿದಂತೆ ಪೊಲೀಸರ ಎದುರು ಹೇಳಿಕೆ ನೀಡಿದ್ದಾನೆ ಎನ್ನುವ ಮಾತುಗಳು ಕೇಳಿಬಂದಿದ್ದು, ಈ ಹೇಳಿಕೆಗಳಿಗೆ ಸಂಬಂಧಿಸಿದಂತೆ ನಾನು ಮಾತನಾಡಬೇಕಿದೆ ಎಂದರು. ಪ್ರಕಾಶ್ ರಾಜ್ ಹೇಳಿದ ಕಾರಣಕ್ಕೆ ನಾನು ಉತ್ತರ ಕೊಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ ಅವರು, ಕೆಲವು ಮಾಧ್ಯಮಗಳು 'ಬುರುಡೆ ಗ್ಯಾಂಗ್' ಕುರಿತು ತೀರ್ಪಿಗೆ ಬಂದಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ನಾನು ಯಾವತ್ತೂ ಧರ್ಮಸ್ಥಳಕ್ಕೆ ಹೋದವನಲ್ಲ. ಮಂಡ್ಯದಿಂದ ಬಂದ ಓರ್ವ ವ್ಯಕ್ತಿ ದಿಢೀರ್ ಅಂತ ಹೇಳಿಕೆ ನೀಡಿದ್ದ ಬಗ್ಗೆ ನಾನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತಾಪಿಸಿದ್ದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಾಗ, ಅವರು ಪ್ರಣವ್ ಮೋಹಂತಿ ಅವರನ್ನು ತನಿಖಾ ಮುಖ್ಯಸ್ಥರನ್ನಾಗಿ ನೇಮಿಸಿದ್ದರು. ಈ ನಡುವೆ, ಗಿರೀಶ್ ಮಟ್ಟಣ್ಣನವರ್ ನನಗೆ ಕರೆ ಮಾಡಿ ಮಾತನಾಡಿದ್ದರು. ಚಿನ್ನಯ್ಯ ತನ್ನೊಂದಿಗೆ ನನ್ನೊಂದಿಗೆ ಮಾತನಾಡಿದ್ದಾನೆ ಎಂದಿದ್ದರು. ಕೂಡಲೇ ನಾನು ಮೋಹಂತಿ ಅವರ ಗಮನಕ್ಕೆ ತಂದೆ. ಈ ರೀತಿ ಕರೆಗಳನ್ನು ತೆಗೆದುಕೊಳ್ಳಬೇಡಿ ಎಂದು ಮೋಹಂತಿ ನನಗೆ ಸೂಚಿಸಿದ್ದರು ಎಂದು ಪ್ರಕಾಶ್ ರಾಜ್ ವಿವರಿಸಿದರು. ಕೋಟ್ಯಂತರ ಜನರು ಭೇಟಿ ನೀಡುವ ಧರ್ಮಸ್ಥಳ ದೇವಸ್ಥಾನದ ಕುರಿತು, ತಮಿಳಿನಲ್ಲಿ ಮಾತನಾಡಿದ್ದ ಆ ವ್ಯಕ್ತಿಯ ಬಗ್ಗೆಯೂ ನಾನು ಮೋಹಂತಿ ಅವರ ಗಮನಕ್ಕೆ ತಂದಿದ್ದೆ ಎಂದರು.
ಎಸ್‌ಐಟಿ ವರದಿಯಲ್ಲಿ ಚಿನ್ನಯ್ಯ ಹೇಳಿಕೆ ನೀಡಿ ಉಲ್ಟಾ ಹೊಡೆದಿದ್ದಾನೆ. ಜನರನ್ನಾಗಲೀ, ಪೊಲೀಸ್ ಅಧಿಕಾರಿಗಳನ್ನಾಗಲೀ, 30 ಹೆಣಗಳಿಗೆ ತಾಳೆ ಆಗುತ್ತಿಲ್ಲ ಎನ್ನುವ ವರದಿಗಳಿವೆ. 400ಕ್ಕೂ ಹೆಚ್ಚು ಸಾವುಗಳು ನಡೆದಿವೆ ಎಂದು ವರದಿಯಿದೆ. ಇಂತಹ ಗಂಭೀರ ಪ್ರಕರಣದಲ್ಲಿ ಧರ್ಮದ ಪ್ರಸ್ತಾಪ ಏಕೆ? ನನ್ನನ್ನು 'ಆ್ಯಂಟಿ ಹಿಂದೂ' ಎಂದು ಹೇಳುತ್ತಾರೆ. ಹಿಂದೂ ಧರ್ಮ ಅಲ್ಲ ಎಂದು ಏಕೆ ಹೇಳುತ್ತೀರಾ? ಚಿನ್ನಯ್ಯನ 200 ಕೋಟಿ ಹೇಳಿಕೆ, ಅಪಪ್ರಚಾರ ಎಂದರೆ ಹೇಗೆ? ಅಲ್ಲಿನ ಹೆಣ್ಣು ಮಕ್ಕಳ ಬಗ್ಗೆ ಪ್ರಶ್ನೆ ಮಾಡಬೇಕು. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ, ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಬೇಡ ಎಂದು ಪ್ರಕಾಶ್ ರಾಜ್ ಒತ್ತಿ ಹೇಳಿದರು. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದೇನೆ, ಅವರು ಒಳ್ಳೆಯ ಮನುಷ್ಯ.
ಧರ್ಮಸ್ಥಳ ಮತ್ತು ಧರ್ಮದ ಮೇಲೆ ನಂಬಿಕೆ ಇಲ್ಲ ಎಂದು ನನ್ನನ್ನು ಈ ವಿಚಾರಕ್ಕೆ ಎಳೆಯಲಾಗುತ್ತಿದೆ. ನಾನು ದೇವರನ್ನು ನಂಬುವುದಿಲ್ಲ ಎಂದು ಹೇಳಿದರೂ, ನನ್ನ ಪತ್ನಿ ದೇವರ ಪೂಜೆ ಮಾಡುತ್ತಾರೆ, ನಾನು ನನ್ನ ಪತ್ನಿಯನ್ನು ನಂಬುತ್ತೇನೆ. ಈ ಕುರಿತು ಅವರ ನಂಬಿಕೆಯ ಬಗ್ಗೆ ಎಂದಿಗೂ ಜಗಳ ಮಾಡುವುದಿಲ್ಲ ಎಂದರು. ಚಿನ್ನಯ್ಯ, ಮಟ್ಟಣ್ಣನವರ್ ಜೊತೆಗೆ ನನ್ನನ್ನು ಸೇರಿಸುತ್ತಿರುವುದೇಕೆ? 100 ಕೋಟಿ, 200 ಕೋಟಿ... ಮುಂದೆ ಏನು? ನಮ್ಮ ಸರ್ಕಾರ, ನಮ್ಮ ಹಣ, ನಾವು ಪ್ರಶ್ನೆ ಮಾಡಬೇಕಿದೆ. ಸಮಾಜಕ್ಕೆ ಪ್ರತಿಸ್ಪಂದಿಸಬೇಕು, ಸೌಜನ್ಯ ಏಕೆ ಸತ್ತಳು ಎಂದು ಉತ್ತರ ಬೇಕಿದೆ. ನನ್ನ ಹೇಳಿಕೆಗಳನ್ನು ತಿರುಚಲಾಗಿದೆ ಎಂದು ಆರೋಪಿಸಿದರು. ಚಿನ್ನಯ್ಯ ತಮಿಳು ಭಾಷೆಯಲ್ಲಿ ನನ್ನನ್ನು ಭೇಟಿ ಮಾಡುವುದಾಗಿ ಮಾತನಾಡಿದ್ದ ಎಂದೂ ಪ್ರಕಾಶ್ ರಾಜ್ ಹೇಳಿದರು.
ಸೌಜನ್ಯ ಸಾವಿಗೆ ನ್ಯಾಯ ಒದಗಿಸುವ ಬದಲು, ನನ್ನ ವೈಯಕ್ತಿಕ ನಂಬಿಕೆಗಳನ್ನು ಮುಂದಿಟ್ಟುಕೊಂಡು ನನ್ನನ್ನು ಅನಗತ್ಯವಾಗಿ ಈ ಪ್ರಕರಣಕ್ಕೆ ಎಳೆಯಲಾಗುತ್ತಿದೆ ಎಂಬುದು ದುರದೃಷ್ಟಕರ ಎಂದು ಪ್ರತಿಕ್ರಿಯಿಸಿದರು.
ಕೊನೆಯಲ್ಲಿ ಚಿನ್ನಯ್ಯ ನಿಮಗೆ ಕರೆ ಮಾಡಿದ್ದು ಜೂನ್ 14 ರಂದು ಎಸ್‌ಐಟಿ ರಚನೆ ಆಗಿದ್ದು ಅನ್ನೋ ಪ್ರಶ್ನೆಗೆ ತಬ್ಬಿಬ್ಬಾದ ಪ್ರಕಾಶ್ ರಾಜ್ ಅದಕ್ಕೆ ನಾನು ಉತ್ತರ ಕೊಡಲ್ಲ ಎಂದು ಹೇಳಿದ್ದಾರೆ.
PublicNext
17/06/2026 04:00 pm