ಬೆಂಗಳೂರು : ನಿಸ್ವಾರ್ಥ ಸೇವೆ, ಕರುಣೆ ಮತ್ತು ಮಮತೆಯ ಸಾಕಾರ ರೂಪವೇ ನರ್ಸಿಂಗ್ ವೃತ್ತಿ. ಆರೋಗ್ಯ ಕ್ಷೇತ್ರದಲ್ಲಿ ಹಗಲಿರುಳು ಶ್ರಮಿಸುವ ಇಂತಹ ಧನ್ವಂತರಿಗಳನ್ನು ಗೌರವಿಸುವ ಅಪೂರ್ವ ಕ್ಷಣಕ್ಕೆ ಇಂದು ವೇದಿಕೆ ಸಜ್ಜಾಗಿತ್ತು.
ಹೌದು, ಇಂದು ಅತ್ಯಂತ ಯಶಸ್ವಿಯಾಗಿ 25ನೇ ವರ್ಷದ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿತು.
ಈ ಅತ್ಯುನ್ನತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಗೌರವಾನ್ವಿತ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರು, ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಹಾಗೂ ಅತ್ಯುತ್ತಮ ಸೇವೆ ಸಲ್ಲಿಸಿದ ನರ್ಸಿಂಗ್ ವೃತ್ತಿಪರರನ್ನು ಆತ್ಮೀಯವಾಗಿ ಸನ್ಮಾನಿಸಿ, ಪ್ರಶಸ್ತಿ ಪ್ರದಾನ ಮಾಡಿದರು.ಯು.ಟಿ. ಖಾದರ್ ಅವರ ಭಾಷಣದ ಪ್ರಮುಖ ಅಂಶ: ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಸಚಿವರು ನರ್ಸಿಂಗ್ ವೃತ್ತಿಯ ಮಹತ್ವವನ್ನು ಮನದುಂಬಿ ಶ್ಲಾಘಿಸಿದರು.
"ನರ್ಸಿಂಗ್ ಪ್ರೊಫೆಷನ್ ಯಾವಾಗಲೂ ಬೆಸ್ಟ್. ರೋಗಿಗಳ ಸೇವೆಯಲ್ಲಿ ತೊಡಗಿಕೊಳ್ಳುವ ನರ್ಸ್‌ಗಳಿಗೆ ಸಿಗುವಷ್ಟು ಪುಣ್ಯ ಬೇರೆ ಯಾರಿಗೂ ಸಿಗಲು ಸಾಧ್ಯವಿಲ್ಲ. ಈ ಪ್ರಶಸ್ತಿಗೆ ಮತ್ತು ನಿಮ್ಮ ಸೇವೆಗೆ ನಿಜವಾದ ಗೌರವ ಸಿಗಬೇಕು ಎನ್ನುವ ದೃಷ್ಟಿಯಿಂದಲೇ ಈ ಒಂದೊಳ್ಳೆ ಅರ್ಥಪೂರ್ಣ ಅವಾರ್ಡ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ" ಎಂದು ನುಡಿದರು.
PublicNext
17/06/2026 05:42 pm
LOADING...