ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಆರ್‌ಎಸ್‌ಎಸ್ ವಿರುದ್ಧ ಮಾತನಾಡುವವರು ನೆಲ ಕಚ್ಚುತ್ತಾರೆ - ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ: ಆರ್‌ಎಸ್‌ಎಸ್ ವಿರುದ್ಧ ಅಪಪ್ರಚಾರ ಮಾಡುವವರು ಖಂಡಿತ ನೆಲ ಕಚ್ಚಿ ಹೋಗುತ್ತಾರೆ. ಇತ್ತೀಚೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಬಗ್ಗೆ ಮಾತನಾಡಿ ಇದು ನೋಂದಣಿಯಾಗಿಲ್ಲ. ಇದರ ಲೆಕ್ಕ ಕೊಡಿ ಎಂದು ಕೇಳಿದ್ದಾರೆ. ಲೆಕ್ಕ ಕೇಳಲು ಇವರು ಯಾರು? ಈತ ಒಬ್ಬ ಅಯೋಗ್ಯ. ಪ್ರಚಾರಕ್ಕಾಗಿ ಏನೇನೋ ಬಡಬಡಿಸುತ್ತಾನೆ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಅಡಿಯಲ್ಲಿ ಸಾವಿರಾರು ಸಂಘ ಸಂಸ್ಥೆಗಳಿವೆ. ನೂರಾರು ವರ್ಷಗಳ ಇತಿಹಾಸವಿದೆ. ಖರ್ಗೆ ಅವರಿಗೆ ಆರ್‌ಎಸ್‌ಎಸ್ ಮೇಲೆಯೇ ಏಕೆ ಕಣ್ಣು, ಮುಸ್ಲಿಂ ಸಂಘಟನೆಗಳ ಬಗ್ಗೆ ಅವರೇಕೆ ಮಾತನಾಡುತ್ತಿಲ್ಲ.

ಅವರು ಮಂತ್ರಿಯಾಗಿರಬಹುದು, ಅವರಿಗೆ ಕಾನೂನು ಗೊತ್ತಿದೆ ತಾನೇ, ಕಾನೂನು ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಪ್ರಚಾರಕ್ಕಾಗಿ ಮಾತನಾಡುವುದು ಸರಿಯಲ್ಲ. ಈತನಿಗೆ ವಿನಾಶಕಾರಿ ವಿಪರೀತ ಬುದ್ಧಿ ಎಂಬಂತಾಗಿದೆ ಎಂದರು.

ಮಲ್ಲಿಕಾರ್ಜುನ ಖರ್ಗೆಯಾಗಲಿ, ರಾಹುಲ್ ಗಾಂಧಿಯಾಗಲಿ, ಅವರ ತಂದೆ ರಾಜೀವ್ ಗಾಂಧಿಯಾಗಲಿ, ಅವರ ಅಜ್ಜಿ ಇಂದಿರಾ ಗಾಂಧಿಯವರಾಗಲೀ ಯಾರೂ ಆರ್‌ಎಸ್‌ಎಸ್ ಅನ್ನು ಏನೂ ಮಾಡಲು ಆಗಿಲ್ಲ. ಇವರೇನು ಮಾಡುತ್ತಾರೆ ಎಂದು ಎದುರೇಟು ನೀಡಿದರು.

Edited By :
PublicNext

PublicNext

17/06/2026 07:41 pm

Cinque Terre

9.77 K

Cinque Terre

0

ಸಂಬಂಧಿತ ಸುದ್ದಿ