ಮಂಗಳೂರು: ಮಳೆಗಾಲದ ಹಿನ್ನೆಲೆಯಲ್ಲಿ ಪಾಲಕ್ಕಾಡ್ ವಿಭಾಗದ ರೈಲುಗಳ ಸಂಚಾರ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಪಾಲಕ್ಕಾಡ್ ವಿಭಾಗದ ರೈಲುಗಳ ಮಳೆಗಾಲದ ಸಂಚಾರದ ವೇಳಾಪಟ್ಟಿ ಜೂನ್ 15ರಿಂದ ಅಕ್ಟೋಬರ್ 20ರ ವರೆಗೆ ಬದಲಾಯಿಸಲಾಗಿದೆ.
ಕೊಯಮತ್ತೂರು-ಹಿಸಾರ್ ವೀಕ್ಲಿ ಎಕ್ಸ್‌ಪ್ರೆಸ್ (22476)
.
ಕೊಯಮತ್ತೂರು ಜಂಕ್ಷನ್-ಹಿಸಾರ್ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ಸಂಖ್ಯೆ 22476) ರೈಲಿನ ಬಿಕನೇರ್ ಜಂಕ್ಷನ್‌ನಿಂದ ಹೊರಡುವ ಸಮಯವನ್ನು ಬದಲಾಯಿಸಲಾಗಿದೆ. ಈ ರೈಲು ಬೆಳಗ್ಗೆ 10:30ರ ಬದಲು 10:50ಕ್ಕೆ ಹೊರಡಲಿದೆ.
ಸೂರತ್-ಮಂಗಳೂರು ಬೈ-ವೀಕ್ಲಿ ಎಕ್ಸ್‌ಪ್ರೆಸ್ (19057)
ಸೂರತ್-ಮಂಗಳೂರು ಜಂಕ್ಷನ್ ಬೈ-ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ಸಂಖ್ಯೆ 19057) ಹಲವು ನಿಲ್ದಾಣಗಳಲ್ಲಿ ಆಗಮನ ಮತ್ತು ನಿರ್ಗಮನ ಸಮಯವನ್ನು ಪರಿಷ್ಕರಿಸಲಾಗಿದೆ. ಉಧನಾ ಜಂಕ್ಷನ್‌ಗೆ ರಾತ್ರಿ 7:55ರ ಬದಲು 7:38ಕ್ಕೆ ಆಗಮಿಸಿ, 8 ಗಂಟೆಯ ಬದಲು 7:40ಕ್ಕೆ ಹೊರಡಲಿದೆ. ವಲ್ಸಾದ್‌ಗೆ ರಾತ್ರಿ 8:50ರ ಬದಲು 8:35ಕ್ಕೆ ಆಗಮಿಸಿ, 8:52ರ ಬದಲು 8:37ಕ್ಕೆ ನಿರ್ಗಮಿಸಲಿದೆ. ವಾಪಿ ನಿಲ್ದಾಣಕ್ಕೆ ರಾತ್ರಿ 9:12ರ ಬದಲು 8:53ಕ್ಕೆ ಆಗಮಿಸಿ, 9:14ರ ಬದಲು 8:55ಕ್ಕೆ ಹೊರಡಲಿದೆ. ಪಾಲ್ಗರ್‌ಗೆ ರಾತ್ರಿ 10:19ರ ಬದಲು 10:02ಕ್ಕೆ ಆಗಮಿಸಿ, 10:21ರ ಬದಲು 10:04ಕ್ಕೆ ನಿರ್ಗಮಿಸಲಿದೆ. ವಸಾಯಿ ರೋಡ್‌ಗೆ ರಾತ್ರಿ 11:10ರ ಬದಲು 11:00ಕ್ಕೆ ಆಗಮಿಸಿ, 11:15ರ ಬದಲು 11:05ಕ್ಕೆ ಹೊರಡಲಿದೆ. ಇನ್ನು, ರೋಹಾಕ್ಕೆ ಮುಂಜಾನೆ 2:20ರ ಬದಲು 1:55ಕ್ಕೆ ಆಗಮಿಸಿ, 2:25ರ ಬದಲು 2:00ಕ್ಕೆ ನಿರ್ಗಮಿಸಲಿದೆ. ಮಡ್ಗಾಂವ್‌ಗೆ ಮುಂಜಾನೆ 2:46ರ ಬದಲು 2:30ಕ್ಕೆ ಆಗಮಿಸಿ, 2:48ರ ಬದಲು 2:32ಕ್ಕೆ ಹೊರಡಲಿದೆ.
ಮಂಗಳೂರು-ಸೂರತ್ ಬೈ-ವೀಕ್ಲಿ ಎಕ್ಸ್‌ಪ್ರೆಸ್ (19058)
ಮಂಗಳೂರು ಜಂಕ್ಷನ್-ಸೂರತ್ ಬೈ-ವೀಕ್ಲಿ ಎಕ್ಸ್‌ಪ್ರೆಸ್ (ಸಂಖ್ಯೆ 19058) ರೈಲಿನ ವೇಳಾಪಟ್ಟಿಯೂ ಬದಲಾಗಿದೆ. ಈ ರೈಲು ಉಧನಾ ಜಂಕ್ಷನ್‌ಗೆ ರಾತ್ರಿ 11:20ರ ಬದಲು 11:13ಕ್ಕೆ ಆಗಮಿಸಿ, 11:25ರ ಬದಲು 11:15ಕ್ಕೆ ಹೊರಡಲಿದೆ. ವಲ್ಸಾದ್‌ಗೆ ರಾತ್ರಿ 10:25ಕ್ಕೆ ಆಗಮಿಸಿ 10:27ಕ್ಕೆ ಹೊರಡಲಿದೆ. ವಾಪಿ ನಿಲ್ದಾಣಕ್ಕೆ ರಾತ್ರಿ 8:55ರ ಬದಲು 10:00ಕ್ಕೆ ಆಗಮಿಸಿ, 8:57ರ ಬದಲು 10:02ಕ್ಕೆ ಹೊರಡಲಿದೆ. ಪಾಲ್ಗರ್‌ಗೆ ರಾತ್ರಿ 8:03ಕ್ಕೆ ಆಗಮಿಸಿ 8:05ಕ್ಕೆ ಹೊರಡಲಿದೆ. ವಸಾಯಿ ರೋಡ್‌ಗೆ ರಾತ್ರಿ 7:00ಕ್ಕೆ ಆಗಮಿಸಿ 7:05ಕ್ಕೆ ಹೊರಡಲಿದೆ. ರೋಹಾಕ್ಕೆ ಮಧ್ಯಾಹ್ನ 3:40ಕ್ಕೆ ಆಗಮಿಸಿ, 3:40ರ ಬದಲು 3:45ಕ್ಕೆ ಹೊರಡಲಿದೆ ಎಂದು ರೈಲ್ವೆ ಪ್ರಕಟನೆ ತಿಳಿಸಿದೆ.
Kshetra Samachara
17/06/2026 08:12 pm