ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಧಾನ-ಶಫಾಲಿ ಅಬ್ಬರಕ್ಕೆ ಡಚ್ ಪಡೆ ಸುಸ್ತೋ ಸುಸ್ತು: ಭಾರತಕ್ಕೆ ವಿಶ್ವಕಪ್ ದಾಖಲೆ!

ಲೀಡ್ಸ್: ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಅಬ್ಬರ ಬ್ಯಾಟಿಂಗ್ ಸಹಾಯದಿಂದ ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ತನ್ನ ಅತ್ಯಧಿಕ ಮೊತ್ತವನ್ನು ದಾಖಲಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಲೀಡ್ಸ್ನಲ್ಲಿ ಬುಧವಾರ ನಡೆದ ಮಹಿಳಾ ಟಿ20 ವಿಶ್ವಕಪ್ 2026 ರ ಪಂದ್ಯದಲ್ಲಿ ಭಾರತವು ನೆದರ್ಲ್ಯಾಂಡ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ, 5 ವಿಕೆಟ್ ನಷ್ಟಕ್ಕೆ 209 ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದೆ. ನೆದರ್ಲ್ಯಾಂಡ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ, 5 ವಿಕೆಟ್ ನಷ್ಟಕ್ಕೆ 209 ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದೆ

ಭಾರತದ ಪರ ಸ್ಮೃತಿ ಮಂಧಾನ ಕೇವಲ 47 ಎಸೆತಗಳಲ್ಲಿ 74 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿದರೆ, ಶಫಾಲಿ ವರ್ಮಾ 38 ಎಸೆತಗಳಲ್ಲಿ 55 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು. ಈ ಹಿಂದೆ 2018ರಲ್ಲಿ ನ್ಯೂಜಿಲೆಂಡ್ ವಿರುದ್ಧ ಗಳಿಸಿದ್ದ 194/5 ರನ್, ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾರತದ ಹಿಂದಿನ ಅತ್ಯಧಿಕ ಮೊತ್ತವಾಗಿತ್ತು.

ಈ ಪಂದ್ಯದಲ್ಲಿ ಭಾರತ ವನಿತೆಯರ ಬೌಲಿಂಗ್ ದಾಳಿಗೆ ನಲುಗಿದ ನೆದರ್ಲ್ಯಾಂಡ್ಸ್ ತಂಡವು 17.3 ಓವರ್‌ಗಳಲ್ಲಿ 114 ಗಳಿಸಿ ಆಲೌಟ್ ಗೆ ತುತ್ತಾಯಿತು. ಭಾರತವು 95 ರನ್ ಗಳಿಂದ ಭರ್ಜರಿ ಗೆಲುವು ದಾಖಲಿಸಿತು.‌

Edited By : Vijay Kumar
PublicNext

PublicNext

18/06/2026 07:11 am

Cinque Terre

14.94 K

Cinque Terre

1

ಸಂಬಂಧಿತ ಸುದ್ದಿ