ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇತಿಹಾಸ ಸೃಷ್ಟಿಸಿದ ಭಾರತ: ಎಂಟನೇ ಬಾರಿಗೆ 400+ ರನ್ ಗಳಿಸಿ ಹೊಸ ಮೈಲಿಗಲ್ಲು!

ಲಕ್ನೋ: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ 400+ ರನ್‌ಗಳಿಸಿದ ದಾಖಲೆಯಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಸರಿಗಟ್ಟಿದೆ.

ಲಕ್ನೋದಲ್ಲಿ ನಿನ್ನೆ (ಬುಧವಾರ) ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತವು 49.5 ಓವರ್‌ಗಳಲ್ಲಿ 402 ರನ್ ಗಳಿಸುವ ಮೂಲಕ ತಮ್ಮ ಎಂಟನೇ 400+ ಸ್ಕೋರ್ ದಾಖಲಿಸಿತು. ಈ ಮಹತ್ವದ ಸಾಧನೆಯೊಂದಿಗೆ, ಏಕದಿನ ಕ್ರಿಕೆಟ್‌ನಲ್ಲಿ ಎಂಟು ಬಾರಿ 400ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ತಂಡವಾಗಿ ಭಾರತ ಹೊರಹೊಮ್ಮಿದೆ.

ಭಾರತದ ಇದುವರೆಗಿನ ಅತ್ಯಧಿಕ ಏಕದಿನ ಸ್ಕೋರ್ 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗಳಿಸಿದ 418/5 ಆಗಿದೆ. ಇನ್ನುಳಿದಂತೆ, ಈ ಪಟ್ಟಿಯಲ್ಲಿ ಇಂಗ್ಲೆಂಡ್ ಏಳು 400+ ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಮೂರು 400+ ರನ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

Edited By : Vijay Kumar
PublicNext

PublicNext

18/06/2026 07:23 am

Cinque Terre

56.51 K

Cinque Terre

0

ಸಂಬಂಧಿತ ಸುದ್ದಿ