ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ದೊಡ್ಮನ್ಸ ಹೀರೋಗಾಗಿ ಹೀರೋಯಿನ್ ಮಾಡಿದ್ದೇನು ಗೊತ್ತಾ?"

ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯಕ್ಕೆ ಸಾಕ್ಷಿಯಾಗುವ ಸುದಿನ ಬಂದಿದೆ. 'ವೇದಿಕ್ ಕಾಸ್ಮೋಸ್' ಬ್ಯಾನರ್ ಅಡಿಯಲ್ಲಿ ಅತ್ಯಂತ ವಿಭಿನ್ನ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ದೊಡ್ಮನ್ಸ ಚಿತ್ರವೀಗ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸದ್ದು ಮಾಡಲು ಸಜ್ಜಾಗಿದೆ.

ಈ ಚಿತ್ರದ ವಿಶೇಷತೆಯೆಂದರೆ, ಪ್ರತಿಭಾವಂತ ತಂತ್ರಜ್ಞ ಶರತ್ ಕೃಷ್ಣ ಅವರು ಕೇವಲ ಆ್ಯಕ್ಷನ್ ಕಟ್ ಹೇಳುವುದಷ್ಟೇ ಅಲ್ಲದೆ, ಕಥೆಯ ನಾಯಕನಾಗಿ ಅದ್ಧೂರಿಯಾಗಿ ಕ್ಯಾಮೆರಾ ಮುಂದೆ ನಿಂತಿದ್ದಾರೆ. ಇವರಿಗೆ ಜೋಡಿಯಾಗಿ ಸ್ಯಾಂಡಲ್‌ವುಡ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಲು ಸುಂದರ ನಾಯಕಿಯರಾದ ರೇಷ್ಮಾ ಮತ್ತು ಶಿಲ್ಪಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಈಗಾಗಲೇ ಗಾಂಧಿನಗರದಲ್ಲಿ ತೀವ್ರ ಕುತೂಹಲ ಮೂಡಿಸಿರುವ ದೊಡ್ಮನ್ಸ ಚಿತ್ರದ ಹಾಡುಗಳು ಮಧುರವಾಗಿ ಮೂಡಿಬಂದಿದ್ದು, ಸಂಗೀತ ಪ್ರೇಮಿಗಳ ಮನ ಗೆಲ್ಲಲು ಸಿದ್ಧವಾಗಿವೆ. ಈ ಚಿತ್ರ ತಂಡ ನಮ್ಮ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ್ದಾರೆ. ಏನು ಹೇಳಿದ್ರು ಬನ್ನಿ

ಕೇಳೋಣ...

Edited By : Somashekar
PublicNext

PublicNext

18/06/2026 04:58 pm

Cinque Terre

8 K

Cinque Terre

0

ಸಂಬಂಧಿತ ಸುದ್ದಿ