ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಸೆಮಣೆ ಏರಲು ಸಜ್ಜಾದ ಸ್ಯಾಂಡಲ್‌ವುಡ್ ನಟಿ ರೂಪಿಕಾ

ಬೆಂಗಳೂರು: ಕಿರುತೆರೆ, ಹಿರಿತೆರೆ ಹಾಗೂ ಭರತನಾಟ್ಯ ನೃತ್ಯಗಾರ್ತಿಯಾಗಿ ಖ್ಯಾತಿ ಪಡೆದಿರುವ ನಟಿ ರೂಪಿಕಾ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ರೂಪಿಕಾ, ಕೆನಡಾದ ಇನ್ವೆಸ್ಕೋ ಸಂಸ್ಥೆಯಲ್ಲಿ ಟ್ಯಾಕ್ಸ್ ಸ್ಪೆಷಲಿಸ್ಟ್ ಆಗಿರುವ ಅಂಕಿತ್ ಕೈ ಹಿಡಿಯಲು ಮುಂದಾಗಿದ್ದಾರೆ.

ಜೊತೆಗೆ ಮ್ಯೂಸಿಕಲ್ ಕಂಪೋಸರ್ ಕೂಡಾ ಆಗಿದ್ದು, ಇಂಡಸ್ಟ್ರಿ ಬಗ್ಗೆ ಆಸಕ್ತಿ ಹೊಂದಿರುವ ಅಂಕಿತ್ ಮೂಲತಃ ಬೆಂಗಳೂರಿನವರು 5 ವರ್ಷಗಳಿಂದ ಕೆನಡಾದಲ್ಲಿ ಸೆಟ್ಲ್ ಆಗಿದ್ದಾರೆ. ಹಿರಿಯರು, ಆಪ್ತರ ಸಮ್ಮುಖದಲ್ಲಿ ಇತ್ತೀಚೆಗೆ ನಿಶ್ಚಿತಾರ್ಥ ನೆರವೇರಿದೆ. ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಮದುವೆ ನಡೆಯಲಿದೆ. ಮದುವೆಗೆ ರೂಪಿಕಾ ಆಪ್ತರು, ಇಂಡಸ್ಟ್ರಿ ಹಾಗೂ ರಾಜಕೀಯ ರಂಗದ ಗಣ್ಯರಿಗೆ ಆಹ್ವಾನ ನೀಡಲಿದ್ದಾರೆ. ರೂಪಿಕಾ ಅವರ ನಟನಾ ಪಯಣ ಶುರುವಾಗಿದ್ದು ಕಿರುತೆರೆಯಿಂದ.

ಬೆಳ್ಳಿಚುಕ್ಕಿ, ಬದುಕು, ಅವಳ ಮನೆ, ತ್ರಿವೇಣಿ ಸಂಗಮ ಧಾರಾವಾಹಿಯಲ್ಲಿ ಬಾಲನಟಿಯಾಗಿ ಮೋಡಿ ಮಾಡಿದ್ದರು. 2009ರಲ್ಲಿ ತೆರೆಕಂಡ ಚೆಲುವಿನ ಚಿಲಿಪಿಲಿ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದರು ರೂಪಿಕಾ, ನಂತರ ತೀರ್ಥರೂಪ, ಮಾಯದಂಥ ಮಳೆ, ಬೀರ, ಥರ್ಡ್‌ಕ್ಲಾಸ್, ರುದ್ರಾಕ್ಷಿಪುರ, ಮಂಜರಿ, ನವರಂಗಿ, ಡೈಮಂಡ್ ಕ್ರಾಸ್ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಚಿಲ್ ಬ್ರೋ ಎನ್ನುವ ತೆಲುಗು ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಸಿಂಚನಾ ಎಂಬ ಪಾತ್ರದ ಮೂಲಕ ಮೋಡಿ ಮಾಡುತ್ತಿದ್ದಾರೆ.

Edited By : Manjunath H D
PublicNext

PublicNext

18/06/2026 09:44 pm

Cinque Terre

13.37 K

Cinque Terre

0

ಸಂಬಂಧಿತ ಸುದ್ದಿ