ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರ: ಸಿ ಎ ಪರೀಕ್ಷೆಯಲ್ಲಿ ಕಾರ್ತಿಕ ಭಟ್ಟ ಸಾರಂಗ ಸಾಧನೆ

ಸಿದ್ದಾಪುರ: ತಾಲೂಕಿನ ದೊಡ್ಮನೆ ಸಮೀಪದ ಚಿಕ್ಕತೋಟದ ಕಾರ್ತಿಕ ಭಟ್ಟ ಸಾರಂಗ ಚಾರ್ಟೆಡ್‌ ಅಕೌಂಟೆಂಟ್‌ (ಸಿಎ) ಅಂತಿಮ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ.

ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲಿ ಪೂರೈಸಿ, ಕುಮಟಾದ ಡಾ.ಎ.ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆದು ಸಿಎ ತರಬೇತಿ ಪಡೆದು, ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೆ 8 ನೇ ರ್‍ಯಾಂಕ್‌, ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಾಧನೆ ಗೈದಿರುವುದು ಉಲ್ಲೇಖನೀಯ. ಇವರು ದೊಡ್ಮನೆ ಸಮೀಪದ ಚಿಕ್ಕತೋಟದ ಸಾರಂಗ ಕುಟುಂಬದ ಗೋಪಾಲ ಭಟ್ಟ ಮತ್ತು ಲತಾ ದಂಪತಿಯ ಪುತ್ರನಾಗಿದ್ದು, ಈತನ ಸಾಧನೆಗೆ ಕುಟುಂಬದವರು, ಹಿತೈಷಿಗಳು ಹರ್ಷ ವ್ಯಕ್ತಪಡಿಸಿ, ಶುಭ ಹಾರೈಸಿದ್ದಾರೆ.

Edited By : PublicNext Desk
Kshetra Samachara

Kshetra Samachara

18/06/2026 05:46 pm

Cinque Terre

6.24 K

Cinque Terre

0

ಸಂಬಂಧಿತ ಸುದ್ದಿ