ಶಿರಸಿ: ಗೋವಾದಿಂದ ದಾವಣಗೆರೆಗೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬನವಾಸಿ ಪೊಲೀಸರು ಬಂಧಿಸಿದ್ದಾರೆ.
ಬನವಾಸಿ-ಶಿರಸಿ ರಸ್ತೆಯ ಕದಂಬ ಸರ್ಕಲ್ ಬಳಿ, ಯಾವುದೇ ಪಾಸ್ ಪರ್ಮಿಟ್ ಇಲ್ಲದೆ, ಕೆ.ಎ-17 ಎಂ.ಎ: 3075 ನಂಬರಿನ ಹುಂಡೈ ವೆನ್ಯೂ ಕಾರಿನಲ್ಲಿ ಸಾಗಿಸುತ್ತಿದ್ದ ಗೋವಾ ರಾಜ್ಯದ ಲೇಬಲ್ ಹೊಂದಿರುವ ಒಟ್ಟು 5 ಬಾಕ್ಸ್‌ಗಳ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಅರುಣ್ ರಾಮಚಂದ್ರ ರಾವ್ (35) ಮತ್ತು ರಾಘವೇಂದ್ರ ಫಕ್ಕಿರಪ್ಪ (43) ಎಂದು ಗುರುತಿಸಲಾಗಿದೆ.
ಈ ಸಂಬಂಧ ಬನವಾಸಿ ಪೊಲೀಸ್ ಠಾಣೆಯಲ್ಲಿ ತನಿಖಾ ವಿಭಾಗದ ಉಪನಿರೀಕ್ಷಕ ರವೀಂದ್ರ ಬಿರಾದಾರ್ ಅವರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
Kshetra Samachara
19/06/2026 10:42 pm
LOADING...