ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ: ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಬಳಿದು ಅಪಮಾನ

ಚಾಮರಾಜನಗರ : ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಬಳಿದು ಅಪಮಾನ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ನಡೆದಿದೆ.

ವಾರದ ಹಿಂದೆಯಷ್ಟೇ ಯಳಂದೂರು ತಾಲ್ಲೂಕಿನ ಮಸಣಾಪುರದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಬಳಿದು ಅಪಮಾನ ಮಾಡಿದ್ದ ಘಟನೆ ನಡೆದು, ಅಪಮಾನ ಮಾಡಿದ್ದ ಯುವಕ ಸಿಕ್ಕಿಬಿದ್ದಿದ್ದನು. ಈ ಪ್ರಕರಣ ಮಾಸುವ ಮೊದಲೇ ಇದೀಗ ಹೊಂಗನೂರಿನಲ್ಲಿ‌‌ ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳು ಸಗಣಿ ಬಳಿದು ಅಪಮಾನ ಮಾಡಿದ್ದಾರೆ.

ಸ್ಥಳಕ್ಕೆ‌ ಎಸ್ಪಿ ಮುತ್ತುರಾಜ್ ಭೇಟಿ‌‌ ನೀಡಿ ಟವರ್ ಡಂಪ್, ಸಿಸಿಟಿವಿ ಪರಿಶೀಲನೆ ನಡೆಸಿ ಆರೋಪಿ ಬಂಧನಕ್ಕೆ ಭರವಸೆ ನೀಡಿದ್ದಾರೆ.ಕಿಡಿಗೇಡಿ ಕೃತ್ಯಕ್ಕೆ ದಲಿತ ಮುಖಂಡರ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Edited By : PublicNext Desk
PublicNext

PublicNext

19/06/2026 12:52 pm

Cinque Terre

2.79 K

Cinque Terre

0

ಸಂಬಂಧಿತ ಸುದ್ದಿ