ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಜನರ ಆರ್ಥಿಕ ಹೊರೆ ಕಡಿಮೆ ಮಾಡುತ್ತಿದೆ ಸಮಾಜ ಕಲ್ಯಾಣ ಇಲಾಖೆಯ ಭವನಗಳು

ಬೆಳಗಾವಿ; ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಖಾಸಗಿ ಕಲ್ಯಾಣ ಮಂಟಪಗಳ ದುಬಾರಿ ಬಾಡಿಗೆಯನ್ನು ಭರಿಸುವುದು ಕಷ್ಟ. ಈ ಸಮಸ್ಯೆಗೆ ಪರಿಹಾರವಾಗಿ, ಸಮಾಜ ಕಲ್ಯಾಣ ಇಲಾಖೆಯು ಸ್ಥಳೀಯ ಮಟ್ಟದಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಿ, ಅತ್ಯಂತ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಸಾರ್ವಜನಿಕ ಬಳಕೆಗೆ ನೀಡುತ್ತಿದೆ.

ಹೌದು..ಇಂದಿನ ಆಧುನಿಕ ಯುಗದಲ್ಲಿ ಶುಭ ಸಮಾರಂಭ ಮಾಡಲು ಖಾಸಗಿ ಭವನ ಅಥವಾ ಮಂಟಪಗಳಿಗೆ ಲಕ್ಷಾಂತರ ರೂ. ಪಾವತಿ ಮಾಡಬೇಕು. ಹಾಗಾಗಿಯೇ

ಜನರ ಆರ್ಥಿಕ ಹೊರೆ ಕಡಿಮೆ ಮಾಡಲು ಸಮಾಜ ಕಲ್ಯಾಣ ಇಲಾಖೆ ರಾಜ್ಯದಲ್ಲಿ ಸಾವಿರಾರು ಭವನಗಳನ್ನು ನಿರ್ಮಿಸಿ ಶುಭ ಸಮಾರಂಭಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಶೈಕ್ಷಣಿಕ ಸಭೆಗಳನ್ನು ನಡೆಸಲು ಅನುಕೂಲ ಕಲ್ಪಿಸುತ್ತವೆ.

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಏಳಿಗೆಗಾಗಿ ರಾಜ್ಯಾದ್ಯಂತ ವಿವಿಧ ಹಂತಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ಭವನಗಳಿಗೆ ಭಾರಿ ಬೇಡಿಕೆ ಇದೆ.‌

ಸಮಾಜ ಕಲ್ಯಾಣ ಇಲಾಖೆಯು ಡಾ. ಬಾಬು ಜಗಜೀವನ್ ರಾಮ್ ಭವನ, ಡಾ. ಬಿ.ಆರ್. ಅಂಬೇಡ್ಕರ್ ಭವನ ಹಾಗೂ ಸಮುದಾಯ ಭವನಗಳು ಎಂಬ ಹೆಸರಿನಲ್ಲಿ ಭವನ ನಿರ್ಮಿಸಿ ಶೋಷಿತ ವರ್ಗಗಳ ಸಾಮಾಜಿಕ ಕಾರ್ಯಕ್ರಮಗಳಿಗಾಗಿ ಭವನಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಪರಿಶಿಷ್ಟ ಕಾಲೋನಿಗಳಲ್ಲಿ ಸಾರ್ವಜನಿಕ ಬಳಕೆಗೆ ನಿರ್ಮಿಸುವ ಸಾಮಾನ್ಯ ಭವನಗಳು ಸಹ ನಿರ್ಮಾಣವಾಗಿವೆ.‌

ಭವನಗಳನ್ನು ನಿರ್ಮಿಸುವ ಸ್ಥಳ ಮತ್ತು ವ್ಯಾಪ್ತಿಯ ಆಧಾರದ ಮೇಲೆ ಸರ್ಕಾರವು ₹20 ಲಕ್ಷದಿಂದ ₹4 ಕೋಟಿ ವರೆಗೆ ಆರ್ಥಿಕ ಸಹಾಯ ಒದಗಿಸುತ್ತದೆ. ಸುಸಜ್ಜಿತ ಮತ್ತು ವಿಶಾಲವಾದ ಸಭಾಂಗಣಗಳನ್ನು ಹೊಂದಿರುವ ಭವನಗಳಲ್ಲಿ ನಿಶ್ಚಿತಾರ್ಥ, ಮದುವೆ, ನಾಮಕರಣ, ಹುಟ್ಟು ಹಬ್ಬ, ಶೈಕ್ಷಣಿಕ ಕಾರ್ಯಕ್ರಮ ಸೇರಿದಂತೆ ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ಎಲ್ಲಾ ಸಮುದಾಯಗಳಿಗೂ ಭವನಗಳ ಬಳಕೆಗೆ ನೀಡಲಾಗುತ್ತಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 2008 ರಿಂದ 2026 ರ ವರೆಗೆ ಒಟ್ಟು 690 ಭವನಗಳು ನಿರ್ಮಾಣವಾಗಿ ಜನರ ಬಳಕೆಗೆ ಬರುತ್ತಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಹಾಗೂ ನಗರ ಅಥವಾ ಪಟ್ಟಣಗಳಲ್ಲಿ ಸ್ಥಳೀಯ ಸಂಸ್ಥೆಗಳ ಇವುಗಳ ನಿರ್ವಹಣೆ ಮಾಡುತ್ತಿವೆ.‌

Edited By : Vinayak Patil
PublicNext

PublicNext

19/06/2026 05:23 pm

Cinque Terre

5.31 K

Cinque Terre

0

ಸಂಬಂಧಿತ ಸುದ್ದಿ