ಹಗರಿಬೊಮ್ಮನಹಳ್ಳಿ : ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದ ಬೀದಿ ನಾಯಿಯೊಂದು ಊರಲ್ಲಿ ಯಾರೇ ಸತ್ತರೂ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಮನುಷ್ಯನಿಗೆ ಸಂಸ್ಕಾರದ ಪಾಠ ಕಲಿಸುತ್ತಿದೆ
ತೀರ ಮೊನ್ನೆ ಮೊನ್ನೆಯಷ್ಟೇ ಒಂದು ಸುದ್ದಿ ರಾಜ್ಯಾದ್ಯಂತ ಸದ್ದು ಮಾಡಿತ್ತು. ಡಾಕ್ಟರ್ ಪದವಿ ಪಡೆದ ಮಕ್ಕಳು ವೃದ್ಧಾಶ್ರಮದಲ್ಲಿ ಇದ್ದ ತಮ್ಮ ಹೆತ್ತ ತಾಯಿ ತೀರಿದಾಗ ಅವರ ಶವ ಸಂಸ್ಕಾರಕ್ಕೂ ಬರಲಿಲ್ಲ. ಯಾರೋ ಮಾನವೀಯ ಹೃದಯಿ ಸಮಾಜ ಸೇವಕರು ಜೀವನ ಪೂರ್ತಿ ಕಷ್ಟಪಟ್ಟು ತಮ್ಮ ಮಕ್ಕಳನ್ನು ಡಾಕ್ಟರ್ ಮಾಡಿ ದೊಡ್ಡ ಹುದ್ದೆಯಲ್ಲಿಟ್ಟ ಆ ತಾಯಿಯ ಅಂತ್ಯ ಸಂಸ್ಕಾರ ಮಾಡಿ ಮನುಜತೆ ತೋರಿದರು. ಇಂತಹ ಸುದ್ದಿಗಳು ಈಗ ಸರ್ವೇ ಸಾಮಾನ್ಯವಾಗಿವೆ. ಈ ವಿಚಾರಕ್ಕೆ ದಿನನಿತ್ಯದ ಪತ್ರಿಕೆಗಳಲ್ಲಿ ದೃಶ್ಯ ಮಾಧ್ಯಮದಲ್ಲಿ ಪ್ರಕಟವಾಗುತ್ತಲೇ ಇವೆ.
ಒಟ್ಟಾರೆ ಮನುಷ್ಯ ತನ್ನ ಬೆಳವಣಿಗೆಗೆ ತಮ್ಮ ಇಡೀ ಜೀವನದ ದುಡಿಮೆಯನ್ನು ಸವೆಸಿದ ತಮ್ಮ ಹೆತ್ತವರನ್ನು ನೋಡಿಕೊಳ್ಳುವುದಿರಲಿ ಅವರ ಅಂತ್ಯ ಸಂಸ್ಕಾರಕ್ಕೂ ಬರದಷ್ಟು ಅಮಾನವೀಯತೆ ತೋರುತ್ತಿದ್ದಾನೆ. ಇಂತಹ ಕಾಲಘಟ್ಟದಲ್ಲಿ ಇಲ್ಲೊಂದು ಬೀದಿನಾಯಿ ಕಳೆದ ಎರಡು ವರ್ಷಗಳಿಂದಲೂ ಆ ಗ್ರಾಮದಲ್ಲಿ ಯಾರೇ ತೀರಿಕೊಂಡರೂ ಅವರ ಅಂತ್ಯ ಸಂಸ್ಕಾರದ ವರೆಗೂ ಊರ ಗ್ರಾಮಸ್ಥರ ಜೊತೆಯಲ್ಲಿ ಇದ್ದು ಸ್ಮಶಾನದವರೆಗೂ ಹೋಗಿ ಸತ್ತ ವ್ಯಕ್ತಿಗಳ ಮಣ್ಣಾಗುವವರೆಗೂ ಅಲ್ಲೇ ಇರುವ ಮೂಲಕ ಸಂಕಷ್ಟ ಕಾಲದಲ್ಲಿ ಹೇಗೆ ನೊಂದವರ ಸಾಂತ್ವನಕ್ಕೆ ಜೊತೆಯಾಗಬೇಕು ಎಂಬ ಬಹುದೊಡ್ಡ ಮಾನವೀಯ ಪಾಠ ಹೇಳುತ್ತಿದೆ.
ಅಂದ ಹಾಗೆ ಈ ವಿಶೇಷ ಮಾನವೀಯ ಗುಣದ ನಾಯಿ ಇರುವುದು ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ತಂಬ್ರಹಳ್ಳಿ ಗ್ರಾಮದಲ್ಲಿ. ಕಳೆದ ಎರಡು ವರ್ಷಗಳಿಂದ ಈ ಗ್ರಾಮದಲ್ಲಿ ಯಾರೇ ಸತ್ತರೂ ಸತ್ತವರ ಮನೆ ಮುಂದೆ ಒಂದು ಪಟಾಕಿ ಹೊಡೆದರೆ ಸಾಕು ಈ ನಾಯಿ ಅವರ ಮನೆಯ ಮುಂದೆ ಹಾಜರು. ಎಷ್ಟೇ ಜನ ಜಂಗೂಳಿ ಇರಲಿ ಸತ್ತವರ ಶವ ಸಂಸ್ಕಾರ ಆಗುವವರೆಗೂ ಈ ನಾಯಿ ಬೇರೆ ಎಲ್ಲೂ ಕದಲದು. ಮೊದಮೊದಲು ಇದನ್ನು ನಿರ್ಲಕ್ಷಿಸಿದ್ದ ಊರಿನ ಗ್ರಾಮಸ್ಥರು. ನಂತರದ ಈ ನಾಯಿನ ಗುಣವನ್ನು ಗ್ರಹಿಸುತ್ತಾ ಬಂದರು.
ಯಾವ ಜನಾಂಗದವರೂ ಸತ್ತರೂ ಎಷ್ಟೇ ಹೊತ್ತಾದರೂ ಅವರು ಭೂಮಿಯಲ್ಲಿ ಬೆರೆಯುವವರೆಗೂ ಈ ನಾಯಿ ಅವರ ಮನೆಯಿಂದ ಕದಲದೇ ಇರುವುದನ್ನು ನೋಡಿದ ತಂಬ್ರಹಳ್ಳಿ ಗ್ರಾಮಸ್ಥರು ಮನುಷ್ಯ ಕೆಲ ಬಾರಿ ತಮ್ಮ ಅತೀ ಆಪ್ತರೇ ಗತಿಸಿದರೂ ಶವ ಸಂಸ್ಕಾರಕ್ಕೆ ಬರದ ದಿನಗಳಲ್ಲಿ ಒಂದು ಬೀದಿ ನಾಯಿ ತಾನು ವಾಸವಿರುವ ಊರಿನಲ್ಲಿ ಯಾರೇ ತೀರಿಕೊಂಡರೂ ತೀರಿಕೊಂಡವರ ಕುಟುಂಬದ ದುಃಖದಲ್ಲಿ ಭಾಗಿಯಾಗುವುದು ನಿಜಕ್ಕೂ ಸೋಜಿಗ ಜೊತೆಗೆ ನಾಯಿಯ ಈ ಗುಣವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ದಿನ ನಿತ್ಯದ ಬಹುತೇಕ ಸಮಯದಲ್ಲಿಯಿಂದ ತಂಬ್ರಹಳ್ಳಿ ಗ್ರಾಮದ ಸುಣಗಾರ್ ರಂಗಪ್ಪನವರ ಜೊತೆ ಇರುತ್ತದೆ.
ಒಟ್ಟಾರೆ ಹಣದ ಆಸೆಗೆ ಬಿದ್ದು ಮನುಷ್ಯ ಮಾನವೀಯ ಮೌಲ್ಯಗಳನ್ನು ಮರೆಯುತ್ತಿರುವಾಗ ನಿಜವಾದ ಪ್ರಕೃತಿ ಧರ್ಮದ ಮೌಲ್ಯತೆಯನ್ನು ಈ ಮೂಲಕ ಜಗಕ್ಕೆ ಹೇಳುತ್ತಿದೆ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದ ಬೀದಿ ನಾಯಿ.
PublicNext
19/06/2026 07:44 pm