ತರೀಕೆರೆ: ಕೇವಲ ಇನ್ನೂರು ರೂಪಾಯಿ ಹಣ ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ತಲೆಯ ಹಿಂಭಾಗಕ್ಕೆ ಸುತ್ತಿಗೆಯಿಂದ ಜಜ್ಜಿ ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಜೋಡಿ ಗೋವಿಂದಪ್ಪ ಗ್ರಾಮದ ಅಡಿಕೆ ತೋಟದಲ್ಲಿ ಸಂಭವಿಸಿದೆ. ವಾಸಪ್ಪ ಕಾಲೋನಿಯ ನಿವಾಸಿ ಮಂಜುನಾಥ್ ಟಿ.ಎಚ್. ಎಂಬುವವರೇ ಹಲ್ಲೆಯಿಂದ ರಕ್ತದ ಮಡುವಿನಲ್ಲಿ ಬಿದ್ದ ದುರ್ದೈವಿ. ಇವರು ಎಂದಿನಂತೆ ತಮ್ಮ ತೋಟದಲ್ಲಿ ಡ್ರಿಪ್ ಪೈಪ್‌ಲೈನ್ ಪರಿಶೀಲಿಸುತ್ತಿದ್ದಾಗ, ಅಲ್ಲಿಗೆ ಬಂದ ಅದೇ ಕಾಲೋನಿಯ ಗಣೇಶ ಎಂಬಾತ ₹200 ಸಾಲ ಕೇಳಿದ್ದಾನೆ. ಮಂಜುನಾಥ್ ಹಣವಿಲ್ಲ ಎಂದಿದ್ದಕ್ಕೆ ಉದ್ರಿಕ್ತನಾದ ಗಣೇಶ ಸುತ್ತಿಗೆಯಿಂದ ಮಂಜುನಾಥ್ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ. ತಲೆಯಿಂದ ರಕ್ತದ ಚಿಮ್ಮಿ ಕಿರುಚಾಡುತ್ತಿದ್ದ ಮಂಜುನಾಥ್ ಅವರನ್ನು ಪಕ್ಕದ ತೋಟದವರು ತಕ್ಷಣವೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ತರಿಕೆರೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
19/06/2026 09:36 pm
LOADING...