ಕಡೂರು: ತಂದೆಯ ಅನಾರೋಗ್ಯದ ನಡುವೆಯೇ ರಾತ್ರಿ ವೇಳೆ ಮನೆಯಿಂದ ಹೊರಬಂದ 16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ನಿಗೂಢವಾಗಿ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಲಕ್ಷ್ಮಿಪುರದಲ್ಲಿ ನಡೆದಿದೆ. ಕಡೂರು ಪಟ್ಟಣದ ನಿವಾಸಿ ಲತಾ ಎಂಬುವರ ಮಗಳೇ ಕಾಣೆಯಾದ ದುರ್ದೈವಿ. ಬಾಲಕಿಯ ತಂದೆ ಅಣ್ಣಪ್ಪ ಅನಾರೋಗ್ಯದ ಕಾರಣ ಕಡೂರು ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದರಿಂದ ತಾಯಿ ಆಸ್ಪತ್ರೆಯಲ್ಲೇ ಇದ್ದರು. ಕಳೆದ ಬುಧವಾರ ರಾತ್ರಿ ಸುಮಾರು 9 ಗಂಟೆಗೆ ಊಟ ಮುಗಿಸಿದ ಬಾಲಕಿ, ತನಗೆ ಹೊಟ್ಟೆನೋವು ಎಂದು ಹೇಳಿ ಮನೆಯ ಹೊರಗೆ ಬಂದು ಕುಳಿತಿದ್ದಾಳೆ. ಆದರೆ ಸ್ವಲ್ಪ ಸಮಯದ ನಂತರ ಆಕೆಯ ತಮ್ಮ ಧನು ಹೊರಗೆ ಬಂದು ನೋಡಿದಾಗ ಅಕ್ಕ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಗಾಬರಿಗೊಂಡ ಕುಟುಂಬಸ್ಥರು ಮತ್ತು ಸಂಬಂಧಿಕರು ಸುತ್ತಮುತ್ತಲಿನ ಪ್ರದೇಶ ಹಾಗೂ ಎಲ್ಲೆಡೆ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಹಂಚಿಹಳ್ಳಿ ಗ್ರಾಮದ ದಿನೇಶ್ ಎಂಬಾತನ ಜೊತೆಯಲ್ಲಿ ಬಾಲಕಿ ಹೋಗಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದ್ದು, ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಾಲಕಿಯ ಪತ್ತೆಗಾಗಿ ತೀವ್ರ ಜಾಲ ಬೀಸಿದ್ದಾರೆ.
Kshetra Samachara
19/06/2026 09:54 pm
LOADING...