ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ರೌಡಿ ಸ್ಟೈಲ್ ಬರ್ತ್‌ಡೇ - ನಡುರಸ್ತೆಯಲ್ಲಿ ಲಾಂಗ್‌ನಿಂದ ಕೇಕ್ ಕತ್ತರಿಸಿದ ಯುವಕನ ಮೇಲೆ FIR!

ಚಿಕ್ಕಮಗಳೂರು: ಕಾನೂನು ಉಲ್ಲಂಘಿಸಿ, ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿದ ಘಟನೆ ಚಿಕ್ಕಮಗಳೂರು ಹೊರ ವಲಯದ ವಾಜಪೇಯಿ ಲೇಔಟ್‌ನಲ್ಲಿ ಕಳೆದ ರಾತ್ರಿ ಬೆಳಕಿಗೆ ನಡೆದಿದೆ.

20 ವರ್ಷದ ಮಹಮ್ಮದ್ ಸಮೀರ್ ಎಂಬ ಯುವಕ ಹತ್ತಕ್ಕೂ ಹೆಚ್ಚು ಸ್ನೇಹಿತರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾನೆ. ಕಾರಿನಲ್ಲಿ ರೌಡಿ ಸ್ಟೈಲ್‌ನಲ್ಲಿ ಬಂದು ಕಾರಿನ ಬಾನೆಟ್ ಮೇಲೆ 5 ಕೆಜಿ ಕೇಕ್ ಇಟ್ಟು, ಸಾರ್ವಜನಿಕ ರಸ್ತೆಯಲ್ಲೇ ಸುಮಾರು ಎರಡೂವರೆ ಅಡಿ ಉದ್ದದ ತಲ್ವಾರ್ (ಲಾಂಗ್) ಬಳಸಿ ಅದನ್ನು ಕತ್ತರಿಸಿದ್ದಾನೆ.

ಈ ಹುಟ್ಟುಹಬ್ಬದ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಡುರಸ್ತೆಯಲ್ಲಿ ಮಾರಕಾಸ್ತ್ರ ಪ್ರದರ್ಶಿಸಿ ಜನರಲ್ಲಿ ಭಯದ ವಾತಾವರಣ ನಿರ್ಮಿಸಿದ ಹಾಗೂ ಕಾನೂನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಆರೋಪಿ ಮಹಮ್ಮದ್ ಸಮೀರ್ ವಿರುದ್ಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Edited By : Vinayak Patil
PublicNext

PublicNext

19/06/2026 02:15 pm

Cinque Terre

9.39 K

Cinque Terre

4

ಸಂಬಂಧಿತ ಸುದ್ದಿ