ಬೆಳಗಾವಿ: ಹೆದ್ದಾರಿಯಲ್ಲೇ ಧರಣಿ ನಡೆಸುವ ಮೂಲಕ ಎಂಇಎಸ್ ಕಾರ್ಯಕರ್ತರು ಹೈಡ್ರಾಮಾ ನಡೆಸಿರುವ ಘಟನೆ ಇಂದು ಬೆಳಗ್ಗೆ ಹತ್ತರಗಿ ಟೋಲ್ ಗೇಟ್ ಬಳಿ ನಡೆದಿದೆ.
ಗೃಹ ಸಚಿವ ಅಮಿತ್ ಶಾ ಅವರು ಕೊಲ್ಹಾಪುರ ಪ್ರವಾಸ ಕೈಗೊಂಡಿದ್ದಾರೆ. ಗಡಿ ವಿಷಯ ಮಾತನಾಡಲು ಎಂಇಎಸ್ ನಾಯಕರು ಕೊಲ್ಹಾಪುರಕ್ಕೆ ತೆರಳಿದರು.
ಭದ್ರತಾ ಕಾರಣಕ್ಕೆ ಮಹಾರಾಷ್ಟ್ರ ಪೊಲೀಸರಿಂದ ಕರ್ನಾಟಕ ಪೊಲೀಸರಿಗೆ ಸೂಚನೆ ನೀಡಿರುವ ಕಾರಣ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ಎಂಇಎಸ್ ಪುಂಡರು ತಡೆಯಲಾಗಿದೆ.
ವಾಹನ ತಡೆ ಕ್ರಮ ಖಂಡಿಸಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಎಂಇಎಸ್ ಪುಂಡರ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಹತ್ತರಗಿ ಟೋಲ್ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ವಾಹನ ಸಂಚಾರಕ್ಕೂ ಅಡೆತಡೆ ಉಂಟಾಯಿತು.
PublicNext
20/06/2026 01:24 pm
LOADING...