ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕುತ್ತಿಗೆ ಭಾಗಕ್ಕೆ ಇರಿದು ಪರಾರಿಯಾದ ಅಪರಿಚಿತರು

ಬೆಳಗಾವಿ: ಬೆಳಗಾವಿ ನಗರದಲ್ಲಿ ವ್ಯಕ್ತಿಯೊಬ್ಬನ ಮೇಲೆ ಅಪರಿಚಿತರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಧರ್ಮನಾಥ ಭವನದ ಬಳಿ ನಡೆದಿದೆ.

ನೇಮಿನಾಥ್ ಬುಡವಿ (56), ಅಲಾರವಾಡ ಪಾಟೀಲ ಗಲ್ಲಿಯ ನಿವಾಸಿಯಾಗಿದ್ದು ಯಾರೋ ಅಪರಿಚಿತರು ಹರಿತವಾದ ಕಬ್ಬಿಣದ ಆಯುಧದಿಂದ ಕುತ್ತಿಗೆ ಭಾಗಕ್ಕೆ ಇರಿದು ಪರಾರಿಯಾಗಿದ್ದಾರೆ. ಗಾಯಗೊಂಡ ನೇಮಿನಾಥ್ ಅವರು ಧರ್ಮನಾಥ ಭವನದಿಂದ ಖಡೇಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಗೊಂದಳಿಗಲ್ಲಿವರೆಗೂ ನಡೆದುಕೊಂಡು ಬಂದಿದ್ದಾರೆ. ಬಳಿಕ ಅಲ್ಲಿ ಕುಳಿತಿದ್ದ ವೇಳೆ ಮಾಹಿತಿ ಪಡೆದ ಖಡೇಬಜಾರ್ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದು, ಹಲ್ಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By :
PublicNext

PublicNext

19/06/2026 05:29 pm

Cinque Terre

5.1 K

Cinque Terre

0

ಸಂಬಂಧಿತ ಸುದ್ದಿ