ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಮುಂಗಾರು ವಿಳಂಬ; ಬಿತ್ತನೆ ಮಾಡಿದ್ದ ರೈತರಿಗೆ ಬೆಳೆ ಒಣಗುವ ಭೀತಿ

ಬೆಳಗಾವಿ: ಮುಂಗಾರು ಮಳೆ ವಿಳಂಬ ಆಗಿರುವುದು ಬೆಳಗಾವಿ ಜಿಲ್ಲೆಯ ರೈತರನ್ನು ಚಿಂತೆಗೀಡು ಮಾಡಿದೆ. ಚೆನ್ನಾಗಿ ಮಳೆ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ರೈತಾಪಿ ವರ್ಗಕ್ಕೆ ಈಗ ಬೆಳೆ ಒಣಗುವ ಭೀತಿ ಕಾಡುತ್ತಿದೆ.

ಬೆಳಗಾವಿ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಚೆನ್ನಾಗಿ ಆಗಿತ್ತು. ಆದರೆ, ಮುಂಗಾರು ಮಳೆ ಕೈಕೊಟ್ಟಿದೆ. ಇಲ್ಲಿಯವರೆಗೆ ಶೇ.50ರಷ್ಟು ಮಾತ್ರ ಬಿತ್ತನೆ ಆಗಿದೆ. ಇನ್ನುಳಿದ ಶೇ.50ರಷ್ಟು ಭೂಮಿ ಬಿತ್ತನೆ ಸಿದ್ಧಗೊಂಡಿದ್ದು, ಮಳೆ ನೋಡಿಕೊಂಡು ಬಿತ್ತನೆ ಮಾಡೋಣ ಎನ್ನುವ ಚಿಂತನೆಯಲ್ಲಿ ರೈತರಿದ್ದಾರೆ‌. ಬಿತ್ತನೆ ಮಾಡಿ, ಮಳೆ ಆಗದೇ ಹೋದರೆ ಮತ್ತೆ ನಷ್ಟ ಆಗುತ್ತದೆ. ಹೀಗಾಗಿ, ಇನ್ನೂ ಸ್ವಲ್ಪ ಕಾಯೋಣ ಎನ್ನುತ್ತಿದ್ದಾರೆ. ಆದರೆ, ಈಗಾಗಲೇ ಬಿತ್ತಿರುವ ಬೆಳೆಗಳು ಇನ್ನು ಒಂದು ವಾರ ಮಳೆ ಆಗದಿದ್ದರೆ ಸಂಪೂರ್ಣ ಒಣಗಿ ಹೋಗುವ ಸಾಧ್ಯತೆ ಇದೆ.

ಮೇ ತಿಂಗಳ ಕೊನೆ ಮತ್ತು ಜೂನ್ ತಿಂಗಳ ಮೊದಲ ವಾರದಲ್ಲಿ ಬಿದ್ದ ಮಳೆಯಿಂದ ಒಂದಷ್ಟು ಬಿತ್ತನೆ ಆಗಿದೆ. ಆದರೆ, ಜೂನ್ ಎರಡನೇ ವಾರದಲ್ಲಿ ತೇವಾಂಶ ಗಟ್ಟಿಗೊಳಿಸುವಷ್ಟು ದೊಡ್ಡ ಮಳೆ ಸುರಿದಿಲ್ಲ. ಹಾಗಾಗಿ ಬಹಳಷ್ಟು ಕಡೆ ಬಿತ್ತನೆ ಬಾಕಿಯಿದ್ದು, ಈವರೆಗೆ ಶೇ. 51ರಷ್ಟು ಮಾತ್ರ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ 7,52,312 ಹೆಕ್ಟೇ‌ರ್ ಪ್ರದೇಶ ಬಿತ್ತನೆ ಗುರಿ ಇದ್ದು ಜೂ. 15ರ ವರೆಗೆ 3,81,200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

2,29,229 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಅದೇ ರೀತಿ ಸೋಯಾಬೀನ್- 42,405, ಹೆಸರು-38,271, ಭತ್ತ-32,540, ಮೆಕ್ಕೆಜೋಳ-14,820, ಉದ್ದು-9,933, ಹತ್ತಿ-8,433 ಸೇರಿದಂತೆ ತೊಗರಿ, ಜೋಳ, ಶೇಂಗಾ, ಸೂರ್ಯಕಾಂತಿ ಮತ್ತಿತರ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಮಳೆ ಕೊರತೆಯಿಂದ ಬಿತ್ತನೆ ಆಗಿರುವ ಬೆಳೆಗಳು ತೇವಾಂಶ ಕೊರತೆ ಎದುರಿಸುತ್ತಿದೆ.

ಒಟ್ಟಿನಲ್ಲಿ ರಣ ರಣ ಬಿಸಿಲು ಬೀಳುತ್ತಿದ್ದು, ಬೇಸಿಗೆ ಕಾಲದ ಅನುಭವ ಆಗುತ್ತಿದೆ. ಹೀಗಾಗಿ, ಗಡಿ ಜಿಲ್ಲೆ ಬೆಳಗಾವಿ ರೈತರು ಆತಂಕಗೊಂಡಿದ್ದು, ಮಳೆ ದಾರಿ ಕಾಯುತ್ತಾ, ಆಕಾಶದ ಕಡೆ ಮುಖ ಮಾಡಿ ಕುಳಿತಿದ್ದಾರೆ.

Edited By :
PublicNext

PublicNext

18/06/2026 08:05 pm

Cinque Terre

12.31 K

Cinque Terre

0

ಸಂಬಂಧಿತ ಸುದ್ದಿ