ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಲ್ಕೈದು ತಿಂಗಳಿನಿಂದ ಬಾರದ ಪಿಂಚಣಿ ಹಣ: ಕಂಗಾಲಾದ ಫಲಾನುಭವಿಗಳು

ಬೆಳಗಾವಿ: ವಿವಿಧ ಪಿಂಚಣಿ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಕಂಗಾಲಾಗಿರುವ ಫಲಾನುಭವಿಗಳು ತಹಸೀಲ್ದಾರ್ ಕಚೇರಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.‌

ಇಂದು ಬೆಳಗಾವಿ ತಹಸೀಲ್ದಾರ್ ಕಚೇರಿಯಲ್ಲಿ ಜನರು ತಮ್ಮ ಪಿಂಚಣಿ ಹಣ ಬಾರದಕ್ಕೆ ಸಾಲುಗಟ್ಟಿ ನಿಂತು ಹಣ ಯಾಕೆ ಬರುತ್ತಿಲ್ಲ ಎಂದು ಪರಿಶೀಲನೆಗೆ ಮುಂದಾದಾಗ ಶಾಕ್ ಎದುರಾಗಿದೆ.

ಕೆಲ ಪಿಂಚಣಿದಾರರಿಗೆ ನಿಮ್ಮ ಹಣ ಮುಂದಿನ ತಿಂಗಳು ಬರುತ್ತದೆ ಎಂದು ಕಚೇರಿ ಸಿಬ್ಬಂದಿ ಹೇಳಿ ಕಳುಹಿಸಿದರೆ ಇನ್ನೂ ಕೆಲ ಪಿಂಚಣಿದಾರರಿಗೆ ನಿಮ್ಮ ಕುಟುಂಬಸ್ಥರ ಆದಾಯ 32 ಸಾವಿರ ದಾಟಿದೆ. ಇನ್ನು ಮುಂದೆ ಪಿಂಚಣಿ ಬರಲ್ಲ ಎಂದು ಹೇಳಿ ಕಳುಹಿಸುತ್ತಿದ್ದಾರೆ. ವೃದ್ಧಾಪ್ಯ, ವಿಧವಾ, ಸಂಧ್ಯಾ ಸುರಕ್ಷಾ, ವಿಕಲಚೇತನ ಲಕ್ಷಾಂತರ ಫಲಾನುಭವಿಗಳು ಕಳೆದ ನಾಲ್ಕೈದು ತಿಂಗಳಿನಿಂದ ಹಣ ಬಾರದ ಹಿನ್ನೆಲೆ ಪರದಾಟ ನಡೆಸುತ್ತಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಸರ್ಕಾರ ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಫಲಾನುಭವಿಗಳ ಒತ್ತಾಯಿಸಿದರು.

ಇದೇ ವೇಳೆ ತಮ್ಮ ಪಿಂಚಣಿ ಯಾಕೆ ಬರುತ್ತಿಲ್ಲ ಎಂದು ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಅಜ್ಜಿ ನಾನು ಪ್ರತಿ ನಿತ್ಯ ಭಿಕ್ಷೆ ಬೇಡಿ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಿ ಜೀವನ ನಡೆಸುತ್ತಿದ್ದೇನೆ. ಇದೀಗ ಆದಾಯ ಹೆಚ್ಚಿದೆ ಎಂದು ಪಿಂಚಣಿ ಬಂದ್ ಮಾಡಿದ್ದಾರೆ ಎಂದು ತಮ್ಮ ಅಳಲು ತೊಡಿಕೊಂಡರು.

ಮತ್ತೊಬ್ಬ ಫಲಾನುಭವಿ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದು, ಬರುವ ಪಿಂಚಣಿ ಹಣದಿಂದ ಔಷಧಿ ತಿಂದು ಬದುಕುತ್ತಿದ್ದೇವೆ. ಈಗ ಅದು ಬಂದ್ ಆಗಿದೆ ಹೇಗೆ ಬದುಕಬೇಕು ಎಂದು ಆಕ್ರೋಶ ಹೊರ ಹಾಕಿದರು.

ಒಟ್ಟಿನಲ್ಲಿ ಲಕ್ಷಾಂತರ ಜನ ಪಿಂಚಣಿದಾರರಿಗೆ ಸರ್ಕಾರ ಶಾಕ್ ನೀಡಿದ್ದು, ಪಿಂಚಣಿ ಹಣವನ್ನೇ ನಂಬಿಕೊಂಡಿದ್ದ ಜನರು ಹೇಗೆ ಮುಂದಿನ ಜೀವನ ಎಂಬ ಚಿಂತೆಯಲ್ಲಿದ್ದಾರೆ.

Edited By : Somashekar
PublicNext

PublicNext

17/06/2026 06:01 pm

Cinque Terre

7.92 K

Cinque Terre

0

ಸಂಬಂಧಿತ ಸುದ್ದಿ