ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಬಾಗ: ಕೃಷ್ಣಾ ನದಿಯ ತೀರದಲ್ಲಿ ಏಕಾಏಕಿ ಭೂಕುಸಿತ – ರೈತರಲ್ಲಿ ಆತಂಕ

ರಾಯಬಾಗ: ರಾಯಬಾಗ ತಾಲೂಕಿನ ಪರಮಾನಂದವಾಡಿ ಹಾಗೂ ಶಿರಗೂರ ಗ್ರಾಮದ ಸಮೀಪ ಕೃಷ್ಣಾ ನದಿಯ ತೀರದಲ್ಲಿ ಶನಿವಾರ ಏಕಾಏಕಿ ಭೂಕುಸಿತ ಸಂಭವಿಸಿದ ಕಾರಣ ರೈತರಲ್ಲಿ ಆತಂಕ ಮೂಡಿದೆ.

ರಾಯಬಾಗ ತಾಲೂಕಿನ ಕುಡಚಿ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಕೃಷ್ಣಾ ನದಿಯ ಒಡಲು ಕುಸಿತಕ್ಕೆ ಕಾರಣವಾಗಿದೆ. ಭೂಕುಸಿತದ ಪರಿಣಾಮ ನದಿತೀರದ ಕೃಷಿ ಜಮೀನುಗಳಿಗೆ ಅಳವಡಿಸಿದ್ದ ನೂರಾರು ಪಂಪ್‌ಸೆಟ್‌ಗಳು, ವಿದ್ಯುತ್ ಕೇಬಲ್‌ಗಳು ಹಾಗೂ ನೀರಿನ ಪೈಪ್‌ಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಈ ಘಟನೆಯಿಂದ ಕೆಲವು ನಮಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣನವರ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ನಂತರ ರೈತರೊಂದಿಗೆ ಮಾತುಕತೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

ಭೂಕುಸಿತದಿಂದ ಉಂಟಾದ ನಷ್ಟದ ಕುರಿತು ಸರ್ಕಾರದ ಗಮನಸೆಳೆದು ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಅವರು ಭರವಸೆ ನೀಡಿದರು.

ವರದಿ : ಚಿದಾನಂದ ಐಹೊಳೆ, ಪಬ್ಲಿಕ್ ನೆಕ್ಸ್ಟ್, ರಾಯಬಾಗ

Edited By :
PublicNext

PublicNext

14/06/2026 08:00 am

Cinque Terre

12.34 K

Cinque Terre

0

ಸಂಬಂಧಿತ ಸುದ್ದಿ