ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನ ಮುಡುಬಾ, ಹೊಸಳ್ಳಿ ಹಾಗೂ ತೂದೂರು ಗ್ರಾಮಗಳ ವ್ಯಾಪ್ತಿಯಲ್ಲಿ ನೀರಿನ ಮೋಟಾರ್‌ಗೆ ಅಳವಡಿಸಿದ್ದ ಕೇಬಲ್ ಕದಿಯುತ್ತಿದ್ದ ಕಳ್ಳನನ್ನು ಮಾಳೂರು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ನಗರದ ರಾಗಿಗುಡ್ಡ ನಿವಾಸಿ ಕುಮಾರ ಎಸ್.ಕೆ. (31) ಬಂಧಿತ ಆರೋಪಿ. ಆತನಿಂದ 93,000 ಮೌಲ್ಯದ 750 ಮೀಟರ್ ಉದ್ದದ ಕೇಬಲ್ ವೈರ್ ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ್ದ 30,000 ಮೌಲ್ಯದ ಪಲ್ಸರ್ ಬೈಕನ್ನು ಅಮಾನತುಪಡಿಸಲಾಗಿದೆ.
ತುಂಗಾ ನದಿ ತೀರದಲ್ಲಿ ರೈತರು ತೋಟಗಳಿಗೆ ನೀರು ಹಾಯಿಸಲು ಮೋಟಾರ್‌ಗಳನ್ನು ಅಳವಡಿಸಿದ್ದರು. ಈ ಪಂಪ್‌ಸೆಟ್‌ಗಳ ಕೇಬಲ್ ವೈರುಗಳು ಕಳ್ಳತನವಾಗಿದ್ದವು. ಈ ಬಗ್ಗೆ ರೈತರಾದ ಎನ್. ವೆಂಕಟೇಶ್, ರಾಜೇಂದ್ರ ಹೆಚ್.ಎಸ್. ಮತ್ತು ಶಶಿಮೋಹನ ಅವರು ಮಾಳೂರು ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಪತ್ತೆಗೆ ವಿಶೇಷ ತಂಡ ರಚಿಸಿದ್ದರು.
Kshetra Samachara
20/06/2026 01:43 pm
LOADING...