ಬೆಳಗಾವಿ: ಎರಡು ಕೋಟಿ ವಿಮೆಗಾಗಿ ಗಂಡ ಮಾಜಿ ಸೈನಿಕನನ್ನು ಸಲೈನ್ ನಲ್ಲಿ ವಿಷ ಹಾಕಿ ಕೊಲೆ ಮಾಡಿದ್ದ ಪಾಪಿ ಪತ್ನಿ ಸುಮಾ ಕೊಲೆ ಆರೋಪ ಪ್ರಕರಣದಲ್ಲಿ ಜೈಲು ಸೇರಿದ್ದಾಳೆ. ಆದರೆ ಇದೀಗ ಮಗಳು ಮಾಡಿದ ಕೆಲಸಕ್ಕೆ ತಾಯಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸುಮಾ ಮಂಜರಗಿ ಗಂಡನನ್ನೆ ಕೊಲೆ ಮಾಡಿ ಜೈಲು ಸೇರಿದ ಪಾಪಿ ಪತ್ನಿ. ಕೊಲೆ ಆರೋಪದಲ್ಲಿ ಸುಮಾ ಹಾಗೂ ಪ್ರಿಯಕರ ಸೇರಿ 9 ಜನ ಜೈಲು ಸೇರಿದ್ದಾರೆ. ಸುಮಾ ಮಾಡಿದ ಕೆಲಸಕ್ಕೆ ಮನನೊಂದು ಆಕೆಯ ತಾಯಿ ಮಹಾದೇವಿ ಬಾದಾಮಿ(65) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮಹಾದೇವಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಯಮಕನಮರಡಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
20/06/2026 04:08 pm
LOADING...