ರಾಯಬಾಗ: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರಲ್ಲಿ ಆತಂಕ ಹೆಚ್ಚಾಗಿದ್ದು, ವರುಣ ದೇವನ ಕೃಪೆಗಾಗಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೋಗೆರಿ ಗ್ರಾಮದಲ್ಲಿ ಗ್ರಾಮಸ್ಥರು ವಿಶಿಷ್ಟ ಹರಕೆ ನೆರವೇರಿಸಿದ್ದಾರೆ.
ಮಳೆ ಸುರಿಯಲೆಂಬ ಆಶಯದಿಂದ ಎರಡು ಕತ್ತೆಗಳಿಗೆ ಶಾಸ್ತ್ರೋಕ್ತವಾಗಿ ವಿವಾಹ ನೆರವೇರಿಸಿ ಮಳೆರಾಯನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಹಾರೋಗೆರಿ ಗ್ರಾಮದ ತೋಟವೊಂದರಲ್ಲಿ ನಡೆದ ಈ ಅಪರೂಪದ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಕತ್ತೆಗಳಿಗೆ ಹೂಮಾಲೆ ಹಾಕಿ, ಮಂಗಳಸೂತ್ರ ಕಟ್ಟಿಸಿ, ಪೂಜೆ ಸಲ್ಲಿಸಿದರು. ಬಳಿಕ ಗ್ರಾಮದ ಒಳಿತಿಗಾಗಿ ಹಾಗೂ ಉತ್ತಮ ಮಳೆಯಾಗಲೆಂದು ವರುಣ ದೇವರಲ್ಲಿ ಪ್ರಾರ್ಥಿಸಿದರು. ಕತ್ತೆಗಳಿಗೆ ಮದುವೆ ಮಾಡಿದರೆ ಮಳೆ ಬರುತ್ತೆ ಎಂಬ ಜನಪದ ನಂಬಿಕೆ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಜೀವಂತವಾಗಿದೆ. ಇದೇ ನಂಬಿಕೆಯ ಆಧಾರದಲ್ಲಿ ರೈತರು ಹಾಗೂ ಗ್ರಾಮಸ್ಥರು ಈ ಹರಕೆಯನ್ನು ನೆರವೇರಿಸಿದ್ದಾರೆ.
PublicNext
20/06/2026 06:06 pm
LOADING...