ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೃಷಿ ಕ್ಷೇತ್ರದಲ್ಲಿ ಗಣನೀಯ ಸುಧಾರಣೆ; ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಧಾರವಾಡ: ದೇಶದ ಕೃಷಿ ಕ್ಷೇತ್ರದಲ್ಲಿ ಗಣನೀಯ ಸುಧಾರಣೆ ಕಂಡುಬರುತ್ತಿದೆ. ಕೇಂದ್ರ ಸರ್ಕಾರ ಅನೇಕ ರೈತ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಧಾರವಾಡದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರ ಸರಕಾರ ಕಿಸಾನ್ ಸಮ್ಮಾನ ನಿಧಿಯ 23ನೇ ಕಂತು ಬಿಡುಗಡೆ ಮಾಡಿದ್ದು, 9.44 ಕೋಟಿ ರೈತರಿಗೆ 18,800 ಕೋಟಿ ರೂ. ಕಂತು ಬಿಡುಗಡೆ ಮಾಡಲಾಗಿದೆ. 2019ರಲ್ಲಿ ಯೋಜನೆ ಅನುಷ್ಠಾನಗೊಂಡಿದ್ದು, ಈವರೆಗೆ 23 ಕಂತುಗಳಲ್ಲಿ 3.56 ಲಕ್ಷ ಕೋಟಿ ರೂ. ನಿಧಿಯನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ. ಧಾರವಾಡ ಜಿಲ್ಲೆಗೆ 97,703 ರೈತರಿಗೆ 19 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಸಾಲ ಮನ್ನಾ ಮಾಡಬೇಕೆಂಬುದು ರೈತರ ಬೇಡಿಕೆಯಾಗಿದೆ. ಆದರೆ ಕೇಂದ್ರ ಸರಕಾರ ರೈತರಿಗೆ ಪ್ರತಿ ವರ್ಷ 6000 ರೂ. ನೀಡಿ ಅನುಕೂಲತೆ ಕಲ್ಪಿಸಿದೆ. ರೈತರ ಒಟ್ಟು ಸಾಲ 3.06 ಲಕ್ಷ ಕೋಟಿ ರೂ. ಇದ್ದರೆ, 3.56 ಲಕ್ಷ ಕೋಟಿ ರೂ. ಸಮ್ಮಾನ ನಿಧಿ ಮೂಲಕ ರೈತರ ಖಾತೆಗೆ ಜಮಾ ಮಾಡಲಾಗಿದೆ. ಇದಲ್ಲದೇ ರೈತರ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು ವ್ಯಾಪಕ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಬೀಜದಿಂದ ಮಾರುಕಟ್ಟೆವರೆಗಿನ ಪ್ರಕ್ರಿಯೆಗಳಿಗೆ ಅನುಕೂಲತೆ ಕಲ್ಪಿಸಿದೆ. ಹೈನುಗಾರಿಕೆ, ಮೀನು ಸಾಕಾಣಿಕೆಗೆ ಉತ್ತೇಜನ ನೀಡುತ್ತಿದೆ. ನ್ಯಾನೋ ಯೂರಿಯಾ ಸೇರಿದಂತೆ ವಿವಿಧ ರಸಗೊಬ್ಬರ ಹಾಗೂ ಕೀಟನಾಶಕ ಸಿಂಪರಣೆಗೆ ಅನುಕೂಲವಾಗಲು ಶೇ.80 ಸಬ್ಸಿಡಿಯಲ್ಲಿ ಡ್ರೋನ್‌ಗಳನ್ನು ನೀಡಲಾಗುತ್ತಿದೆ. ಈವರೆಗೆ 80,000 ಡ್ರೋನ್‌ಗಳನ್ನು ನೀಡಿರುವುದು ಹೆಗ್ಗಳಿಕೆ ಎಂದರು.

ಇರಾನ್-ಅಮೆರಿಕ ಯುದ್ಧದಿಂದಾಗಿ ಕೇವಲ ಪೆಟ್ರೋಲ್, ಡೀಸೆಲ್ ಮಾತ್ರವಲ್ಲ ರಸಗೊಬ್ಬರ ಪೂರೈಕೆಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಮಸ್ಯೆಯಾಗಿದೆ. ಆದರೂ ಪ್ರಧಾನಿ ಮೋದಿ ನಮ್ಮ ರೈತರ ಸ್ಥಿತಿಗೆ ಸ್ಪಂದಿಸಿ ರಸಗೊಬ್ಬರ ದರವನ್ನು ಹೆಚ್ಚಿಸದೇ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. 1.70 ಲಕ್ಷ ಕೋಟಿ ರೂ. ಗಾತ್ರದ ಕೃಷಿ ಬಜೆಟ್ ಮಂಡಿಸಲಾಗಿದೆ. ಭಾರತ ಜಗತ್ತಿನಲ್ಲಿ ಅತಿ ಹೆಚ್ಚು ಭತ್ತ ಉತ್ಪಾದಿಸುವ ದೇಶವಾಗಿ ಹೊರಹೊಮ್ಮಿದೆ. ಹಾಲು ಉತ್ಪಾದನೆಯಲ್ಲಿ ನಮ್ಮ ದೇಶ ವಿಶ್ವದಲ್ಲೇ ದ್ವಿತಿಯ ಸ್ಥಾನದಲ್ಲಿದೆ ಎಂದು ತಿಳಿಸಿದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/06/2026 10:04 pm

Cinque Terre

12.37 K

Cinque Terre

1

ಸಂಬಂಧಿತ ಸುದ್ದಿ