ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಸಚಿವಸ್ಥಾನಕ್ಕೆ ಭುಗಿಲೆದ್ದ ಪೈಪೋಟಿ - ಹೈ ವೋಲ್ಟೇಜ್ ನಲ್ಲಿ ಲಾಡ್ ಹಾಗೂ ಅಬ್ಬಯ್ಯ

ಕಲಘಟಗಿ : ಕಲಘಟಗಿ ಶಾಸಕರು ಹಾಗೂ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರು ಆದಂತ ಸಂತೋಷ್ ಲಾಡ್ ಅವರು ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿ ಎರಡು ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.ಆದರೆ ಈಗ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡ ನಂತರ ಡಿಕೆಶಿ ಅಧಿಕಾರ ಅವಧಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಸಚಿವ ಸ್ಥಾನಕ್ಕೆ ದೊಡ್ಡ ಪ್ರಮಾಣ ಪೈಪೋಟಿ ಶುರುವಾಗಿದೆ.

ಜಿಲ್ಲೆಯಲ್ಲಿ ಸತತವಾಗಿ ಸಚಿವ ಸ್ಥಾನ ಮುಡಿಗೇರಿಸಿಕೊಂಡು ಬಂದಿರುವ ಲಾಡ್ ಮತ್ತೆ ಪ್ರಯತ್ನ ನಡೆಸಿದ್ದಾರೆ.ಹುಬ್ಬಳ್ಳಿಯ ಪೂರ್ವ ಕ್ಷೇತ್ರದ ಶಾಸಕರಾದಾಂತ ಪ್ರಸಾದ ಅಬ್ಬಯ್ಯ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಅವರು ಈಗ ಸಚಿವ ಸ್ಥಾನಕ್ಕೆ ಸಡ್ಡು ಹೊಡೆದು ನಿಂತಂತಾಗಿದೆ.

ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸಚಿವ ಸ್ಥಾನಕ್ಕೆ ಕಾವೇರುತ್ತಿದ್ದು ಸಂತೋಷ ಲಾಡ್ ಅವರ ಅಭಿಮಾನಿಗಳು ಸಚಿವಸ್ಥಾನ ನೀಡಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ.ಅದೇ ರೀತಿ ನಾವೇನು ಕಡಿಮೆ ಇಲ್ಲ ಎಂಬಂತೆ ಪ್ರಸಾದ ಅಬ್ಬಯ್ಯ ಅವರ ಅಭಿಮಾನಿಗಳು ತಮ್ಮ ನಾಯಕರ ಸಚಿವಸ್ಥಾನಕ್ಕಾಗಿ ಚುರುಕಿನ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸಿರುವ ಸಂತೋಷ ಲಾಡ್ ಇತ್ತೀಚೆಗೆ ಮೌನವಾಗಿದ್ದು ತಮ್ಮ ಕ್ಷೇತ್ರಕ್ಕೂ ಭೇಟಿ ನೀಡದೆ ಇರೋದು ನೋಡಿದರೆ ಸಚಿವಸ್ಥಾನ ಕೈ ತಪ್ಪಲಿದೆಯಾ ಎಂಬ ಅನುಮಾನ ಕ್ಷೇತ್ರದ ಜನರಲ್ಲಿ ಹುಟ್ಟು ಹಾಕುತ್ತಿದೆ.

ಒಟ್ಟಾರೆ ಧಾರವಾಡ ಜಿಲ್ಲೆಯ ಸಚಿವ ಸ್ಥಾನಕ್ಕೆ ಈ ಇಬ್ಬರು ಶಾಸಕರು ಹೆಚ್ಚಿನ ರೀತಿಯಲ್ಲಿ ಹೈ ವೋಲ್ಟೇಜ್ ನಲ್ಲಿ ಪೈಪೋಟಿ ನಡೆಸಿದ್ದು ಇಬ್ಬರಲ್ಲಿ ಯಾರಿಗೆ ಸಿಗುತ್ತೆ ಸಚಿವಸ್ಥಾನ ಎಂಬುದು ಕಾದು ನೋಡಬೇಕಾಗಿದೆ.

ವರದಿ : ಉದಯ ಗೌಡರ ಪಬ್ಲಿಕ್ ನೆಕ್ಸ್ಟ್ ಕಲಘಟಗಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/06/2026 06:54 pm

Cinque Terre

9.14 K

Cinque Terre

1

ಸಂಬಂಧಿತ ಸುದ್ದಿ